ಮಾಡದ ತಪ್ಪಿಗೆ ಶಿಕ್ಷೆ ಏಕೆ – ಲಕ್ಷ್ಮಿ ಹೆಬ್ಬಾಳಕರ್  ಪ್ರಶ್ನೆ

ಮಹಿಳಾ ಕಾಂಗ್ರೆಸ್ ಪ್ರತಿಭಟನೆ

0 82
ಬೆಂಗಳೂರು – ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹೆಚ್ ರವರು ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಪೋಲಿಸರು ಎಫ್ ಐ ಆರ್ ಹಾಕಿರುವುದನ್ನು ಖಂಡಿಸಿ  ರಾಜರಾಜೇಶ್ವರಿ ನಗರ  ಠಾಣೆಯ ಎದುರು ಕರ್ನಾಟಕ ಮಹಿಳಾ ಕಾಂಗ್ರೆಸ್  ಬೃಹತ್ ಪ್ರತಿಭಟನೆ ನಡೆಸಿತು.
  ಮಾಡದ ತಪ್ಪಿಗೆ ಕುಸುಮಾವರ ಮೇಲೆ ಪೋಲಿಸ್ ಎಫ್ ಐ ಆರ್ (FIR) ಹಾಕಿರುವುದು ಖಂಡನೀಯ. ಕೂಡಲೇ ಎಫ್ ಐ ಆರ್ ನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ವಕ್ತಾರರಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದರು.
ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ, ಸೌಮ್ಯ ರೆಡ್ಡಿ, ಉಮಾಶ್ರೀ, ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.