ಜಿಲ್ಲಾ ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿ ಚುನಾವಣೆ: ಅಧ್ಯಕ್ಷ, ಸದಸ್ಯರ ಆಯ್ಕೆ

0 129

ಬೆಳಗಾವಿ: ಜಿಲ್ಲಾ ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿ ಚುನಾವಣೆಯು ಶುಕ್ರವಾರ  ಜಿಲ್ಲಾ ಪಂಚಾಯತ ಸಂಭಾಗಣದಲ್ಲಿ ನಡೆಯಿತು.
ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಶಾ ಪ್ರಶಾಂತ್ ಐಹೊಳೆ ಹಾಗೂ ಸದಸ್ಯರಾಗಿ ಗುರಪ್ಪ ಶಿವನಿಂಗ ದಾಶ್ಯಾಳ, ಜಿತೇಂದ್ರ ಟೋಪಣ್ಣ ಮಾದರ್, ದೇಶಪಾಂಡೆ ರಮೇಶ್ ಬಿ, ಅನಿಲ್ ಪಾರಿಸಪ್ಪ ಮ್ಯಾಕಲ ಮರಡಿ, ಶಿವಗಂಗಾ ಗೊರವನಕೊಳ್ಳ ಹಾಗೂ ಕೃಷ್ಣಪ್ಪ ಬಾಲಪ್ಪ ಲಮಾಣಿ ಇವರು ಆಯ್ಕೆಯಾಗಿದ್ದಾರೆ.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನಿಂಗಪ್ಪ ರಾಮಪ್ಪ ಪಕಾಂಡೆ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಅಜಿತ್ ಕೃಷ್ಣರಾವ್ ದೇಸಾಯಿ, ಸುಮನ್ ಮಡಿವಾಳಪ್ಪ ಪಾಟೀಲ್, ಮಾಧುರಿ ಬಾಬಾಸಾಹೇಬ್ ಶಿಂದೆ, ಲಾವಣ್ಯ ಶಾಮಸುಂದರ ಶಿಲೇದಾರ, ಮೀನಾಕ್ಷಿ ಸುಧೀರ್ ಜೋಡಟ್ಟಿ ಹಾಗೂ ನಿಂಗಪ್ಪ ಅರಕೇರಿ ಆಯ್ಕೆಯಾಗಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸಿದ್ದಪ್ಪ ಅಪ್ಪಣ್ಣ ಮುದಕಣ್ಣವರ್. ಸದಸ್ಯರಾಗಿ ಸುರೇಖಾ ಅಮೂಲ್ ನಾಯಕ, ಲಕ್ಷ್ಮಿ ನಿಂಗಪ್ಪ ಕುರುಬರ, ಬಸವರಾಜ್ ದೇಮಪ್ಪ ಬಂಡಿವಡ್ಡರ್, ಮಲ್ಲಪ್ಪ ಸಿದ್ದಪ್ಪ ಹಿರೇಕುಂಬಿ, ಪವಾರ್ ರಾಜೇಂದ್ರ ರಾಮಪ್ಪ ಹಾಗೂ ಶಶಿಕಲಾ ರಾಜೇಂದ್ರ ಸಣ್ಣಕ್ಕಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅರುಣ್ ಕಟಾಂಬಳೆ. ಸದಸ್ಯರಾಗಿ ಮಾಂತೇಶ್ ಮಲ್ಲಪ್ಪ ಮಗದುಮ್, ಸಿದ್ದು ನಾಗಪ್ಪ ನರಾಟೆ, ಸರಸ್ವತಿ ರಾಮಚಂದ್ರ ಪಾಟೀಲ್, ಸುದರ್ಶನ್ ಅಣ್ಣಾಸಾಹೇಬ ಖೋತ, ಕಸ್ತೂರಿ ಬಸವಂತ ಕಮತೆ ಹಾಗೂ ಸುಜಾತ ಸೂರ್ಯಕಾಂತ್ ಚೌಗುಲೆ ಇವರು ಆಯ್ಕೆಯಾಗಿದ್ದಾರೆ.
ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಪಕೀರಪ್ಪ ದೋ ಹದ್ದನ್ನವರ್. ಸದಸ್ಯರಾಗಿ ಸಿದ್ಧಗೌಡ ಬಾಬುರಾವ್ ಸುಣಗಾರ, ಬೆಳವಡಿ ಶಿವಕ್ಕ ದೇವಪ್ಪ, ಮ್ಯಾಗೇರಿ ಸುರೇಶ ಪಕೀರಪ್ಪ, ಭಾರತಿ ಭೂತಾಲೆ, ಶಂಕರ ಮಾಡಲಗಿ ಹಾಗೂ ಗೋವಿಂದ್ ಕೊಪ್ಪದ್ ಇವರು ಆಯ್ಕೆಯಾಗಿದ್ದಾರೆ.

Leave A Reply

Your email address will not be published.