ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಪಾಪುಲ್ಯಾರಿಟಿ ಇರುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿನ ನೂತನ ಕ್ಯಾಂಟೀನ್ ಉದ್ಘಾಟನೆಗೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದರು.
ನನಗೆ ವಯಸ್ಸಾಗಿದೆ, ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಲಾಗುತ್ತಿಲ್ಲ ಎಂದ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಲ್ಲ ಎನ್ನುತ್ತಾರೆ. ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ಅದೇ ಅವರ ವೈಫಲ್ಯ. ಜನ ಸಿಟ್ಟಿಗೆದ್ದಿದ್ದು, ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ವಿರೋಧ ಪಕ್ಷ ಸರ್ಕಾರದ ತಪ್ಪುಗಳ ವಿರುದ್ದ ನಿರತಂರ ಹೋರಾಟ ಮಾಡುತ್ತಿದೆ. ಅಧಿವೇಶದಲ್ಲಿಯೂ ಧ್ವನಿ ಎತ್ತಿದ್ದೇವೆ. ಸರ್ಕಾರದ ಪ್ರತಿ ವೈಫಲ್ಯವನ್ನು ಜನರಿಗೆ ಮನದಟ್ಟು ಮಾಡಿಸುತ್ತಿದ್ದೇವೆ ಎಂದರು.
ನಟ ದರ್ಶನ- ಯಶ ಬಿಜೆಪಿ ಪರ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಚಾರ ಮಾಡಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಬಿಜೆಪಿ ಅಭ್ಯರ್ಥಿಯ ಸ್ನೇಹಿತರಿರುವ ಹಿನ್ನೆಲೆ ಇಬ್ಬರು ನಟರು ಪ್ರಚಾರಕ್ಕೆ ಬರುತ್ತಿರಬಹುದು. ಆದ್ರೂ ಸೆಲೆಬ್ರಟಿಗಳ ನೋಡಿ ಜನ ಮತ ಹಾಕಲ್ಲ.ಹಿಂದೆ ನಟಿ ಪೂಜಾ ಗಾಂಧಿ ರಾಯಚೂರಲ್ಲಿ ಚುನಾವಣೆಗೆ ನಿಂತಿದ್ರು ಮತದಾರರು ಅವರನ್ನ ಗೆಲ್ಲಿಸಿದ್ರಾ? ಎಂದು ಪ್ರಶ್ನಿಸಿದ ಅವರು, ಸೆಲೆಬ್ರಟಿಗಳು ಬಂದ್ರೆ ಜನ ವೋಟ್ ಹಾಕುತ್ತಾರೆ ಎನ್ನುವುದು ಕಲ್ಪನೆ ಎಂದರು.
ಮಕ್ಕಳು ಸೇವಾದಳ ತರಬೇತಿಯಲ್ಲಿ ಭಾಗಿಯಾಗಲಿದ್ದಾರೆ:
ಮಗ ರಾಹುಲ್,ಮಗಳು ಪ್ರಿಯಾಂಕಾ ರಾಜಕೀಯಕ್ಕೆ ಬರಲು ಪೂರ್ವ ತಯಾರಿಯಾಗಬೇಕಿದೆ. ರಾಜಕೀಯಕ್ಕೆ ಬರಲು ಅವರಿಗೆ ಮುಕ್ತ ಸ್ವಾತಂತ್ರ್ಯವಿದೆ. ಇತ್ತೀಚಿಗೆ ಘಟಪ್ರಭಾದಲ್ಲಿ ಆರಂಭವಾದ ಸೇವಾಕೇಂದ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ಸಮಾಜಸೇವೆ ಎಂದ್ರೆ ಏನು ತಿಳಿದುಕೊಳ್ಳಲಿದ್ದಾರೆ ಎಂದು ಹೇಳಿದರು.
ಬೆಳಗಾವಿ: ಇಲ್ಲಿನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಂಗ್ರೆಸ್ ಭವನ ಕ್ಯಾಂಟಿನ್ ನನ್ನು ಶಾಸಕ ಸತೀಶ ಜಾರಕಿಹೊಳಿ ಇಂದು ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ಮೂರು ಉದ್ದೇಶದಿಂದ ಕಾಂಗ್ರೆಸ್ ಕಚೇರಿಯಲ್ಲಿ ಕ್ಯಾಂಟಿನ್ ತೆರೆ ಯಲಾಗಿದೆ. ಸಾಮಾನ್ಯ ಜನರು, ಕಾರ್ಯಕರ್ತರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ಹಾಗೂ ಕಾಂಗ್ರೆಸ್ ಮಹಾನ್ ನಾಯಕರ ಇತಿಹಾಸ ತಿಳಿಸಿಕೊಡುವ ಉದ್ದೇಶದಿಂದ ಕ್ಯಾಂಟಿನ್ ತೆರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು.
ಬೆಳಗಾವಿ: ಶಿರಾ, ಆರ್ ಆರ್ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಾಗಿಲ್ಲ, ಬದಲಾಗಿ ಸೋಲು ನಿಗದಿಯಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಸಿಎಂ ಬಿಎಸ್ ವೈಗೆ ಟಾಂಗ್ ನೀಡಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ನೂರಕ್ಕೆ ನೂರು ಪರ್ಸೆಂಟ್ ಗೆಲವು ಸಾಧಿಸಲಿದೆ ಎಂದು ವಿಶ್ವಸ ವ್ಯಕ್ತಪಡಿಸಿದರು.
ಶಿರಾ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆಲ್ಲಬೇಕಿತ್ತು.ಕೆಲವು ಸಮಸ್ಯೆ ಹಿನ್ನೆಲೆ ಹಿನ್ನಡೆಯಾಗಿದೆ. ಸದ್ಯ ಎರಡು ಕ್ಷೇತ್ರ ನಮಗೆ ಒಲಿಯಲಿವೆ ಎಂದರು.
ಪ್ರವಾಹ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರು ಸರ್ಕಾರ ದುಡ್ಡು ಬಿಡುಗಡೆ ಮಾಡುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿ, ತಹಸೀಲ್ದಾರ್ ಖಾತೆಗಳಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.