ಶೆಟ್ಟಿಗಲ್ಲಿ ರಸ್ತೆಗೆ ಅಡ್ಡಲಾಗಿ ಮಣ್ಣಿನ ರಾಶಿ ದಿಗ್ಬಂಧನ

ಇದು ಕಳೆದ ಮೂರು ತಿಂಗಳ ಸಮಸ್ಯೆ

0 157

 

ಬೆಳಗಾವಿ ೩: ಕಳೆದ ಮೂರು ತಿಂಗಳಿಂದ ನಗರದ ಶೆಟ್ಟಿಗಲ್ಲಿಯ ಮುಖ್ಯ ಪ್ರವೇಶ ಮಾರ್ಗ ಮುಕ್ತ ಸಂಚಾರಕ್ಕೆ ದಿಗ್ಬಂಧನಗೊಂಡಿದೆ.
ಹಳೇ ಪಿಬಿ ರಸ್ತೆಯನ್ನು ಕಾಂಕ್ರೀಟೀಕರಿಸು ನೆಪದಲ್ಲಿ ಶೆಟ್ಟಿಗಲ್ಲಿ ಪ್ರವೇಶದ ತಿರುವಿನ ರಸ್ತಗೆ ಅಡ್ಡಲಾಗಿ ಮಣ್ಣು, ಕಲ್ಲಿಸ ರಾಶಿಯ ದಿಬ್ಬವನ್ನು ಸೃಷ್ಠಿಸಲಾಗಿದೆ. ಅಟೋಗಳಾಗಲಿ, ಕಾರ್, ಟೆಂಪೋಗಳಾಗಲಿ ಈ ಮಾರ್ಗವಾಗಿ ಸಂಚರಿಸಲಗದೆ ಪಕ್ಕದ ಚವಾಟಗಲ್ಲಿ ರಸ್ತೆಯಿಂದ ಸುತ್ತು ಹಾಕಿ ಶೆಟ್ಟಿಗಲ್ಲಿಯ ಇನ್ನೊಂದು ಬದಿಯಿಂದ ಬೀದಿ ಪ್ರವೇಶಿಸುವ ಅನಿವಾರ್ಯತೆ ಇಲ್ಲಿನ ರಹವಾಸಿಗಳ ಕಳೆದ ಮೂರು ತಿಂಗಳ ಸಮಸ್ಯೆಯ ತಲೆನೋವಾಗಿ ಪರಿನಮಿಸಿದೆ.
ಪಕ್ಕದ ಮಣ್ಣಿನ ದಿಣ್ಣೆಯನ್ನೇ ಸಹಕರಿಸಿಕೊಂಡು ದ್ವಿಚಕ್ರ ವಾಹ‌ನಗಳ ಸವಾರಾರು ಎದ್ದು-ಬಿದ್ದು ಹೇಗೋ ಹೊಂದಿಕೊಂಡಿದ್ದಾರೆ. ಆದರೆ ಉಳಿದ ವಾಹನ ಸವಾರರ ಸಂಚಾರ ಸುತ್ತು ಹೊಡೆಯುವುದೇ ಆಗಿದೆ.
ಅಕ್ಕಪಕ್ಕದ ಬೇರೆ ಗಲ್ಲಿಗಳ ರಸ್ತಗಳು ಮುಕ್ಕವಾಗಿದ್ದರೂ ಶೆಟ್ಟಿಗಲ್ಲಿಯ ಈ ರಸ್ತೆ ದಿಗ್ಬಂಧನ ಇಲ್ಲಿನ ರಹವಾಸಿಗಳ ಆಕ್ರೋಷಕ್ಕೆ ಕಾರಣವಾಗಿದೆ.
ಅಲ್ಲದೇ ನಿತ್ಯ ಕಚೇರಿ, ಶಾಲಾ ಕಾಲೇಜುಗಳಿಗೆ ಹೋಗಿಬರುವ ಮಾರ್ಗವೂ ಇದಾಗಿದೆ. ಬೀದಿಯಲ್ಲಿನ ಕೆಲ ವಹಿವಾಟಿಗೂ ರಸ್ತೆ ದಿಗ್ಬಂಧನದಿಂದ ಸಮಸ್ಯೆಯಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಎಚ್ಚರಿಸಲಾಗಿದೆ.
ಇದು ಪಾಲಿಕೆ ವ್ಯಾಪ್ತಿಗೆ ಬರುತ್ತದೋ, ಇಲ್ಲವೇ ಲೋಕೋಪಯೋಗಿ ವ್ಯಾಪ್ತಿಗೋ ಎನ್ನವ ಗೊಂದಲದಲ್ಲಿ ರಹವಾಸಿಗಳಿದ್ದಾರೆ. ತಕ್ಷಣ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಕಲ್ಲುಮಣ್ಣಿನ ರಾಶಿಯನ್ನು ಸಂಬಂಧಪಟ್ಟ ಆಡಳಿತ ತೆರವುಗೊಳಿಸದಿದ್ದಲ್ಲಿ ಬೀದಿಯ ರಹವಾಸಿಗಳು ಹಳೇ ಪಿಬಿ ರಸ್ತೆಗಿಳಿದು ರಸ್ತೆತಡೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.