ವಿಶಾಲ ಕರ್ನಾಟಕ ವಾರ್ತೆ ಬೆಳಗಾವಿ ನನ್ನ ನಸೀಬಿನಲ್ಲಿದ್ದರೆ ನಾನು ಮಂತ್ರಿ ಯಾಗುತ್ತೇನೆ. ಅದರನ್ನು ಯಾರಿಂದಲೂ ತಪ್ಪಿಸಲು ಸಾಧ್ಯಇಲ್ಲ ಎಂದು ಬಿಜೆಪಿ ನಾಯಕ, ಹುಕ್ಕೇರಿ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಲ್ಲಿ ನನ್ನ ಹೆಸರು ಇದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಮಂತ್ರಿಯಾದರೂ ಕೆಲಸ ಮಾಡುತ್ತೇನೆ. ಇಲ್ಲದಿದ್ದರೂ ಶಾಸಕನಾಗಿ ಕೆಲಸ ಮಾಡುತ್ತೇನೆ. ಮಂತ್ರಿ ಸ್ಥಾನಕ್ಕಾಗಿ ನಾನು ಲಾಭಿ ಮಾಡುವುದಿಲ್ಲ. ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ನನಗಿದೆ.ನನ್ನ ನಸೀಬಿನಲ್ಲಿ ಮಂತ್ರಿ ಸ್ಥಾನ ಸಿಗುವುದಿದ್ದರೆ ಸಿಗುತ್ತದೆ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯಇಲ್ಲ ಎಂದು ಹೇಳಿದರು.