‘ಪ್ರಯತ್ನ’ ಎಂಬ ನೂತನ ವೆಬ್‌ಸೈಟ್ ಬಿಡುಗಡೆ

0 102

ಬೆಳಗಾವಿ: ಮಹೇಶ ಫೌಂಡೇಶನ ಸಂಸ್ಥೆಯ ‘ಪ್ರಯತ್ನ’ ಎಂಬ ನೂತನ ವೆಬ್‌ಸೈಟ್ ಅನ್ನು ಸತೀಶ ಶುಗರ್ಸ್ ನಿರ್ದೇಶಕರಾದ ರಾಹುಲ್ ಹಾಗೂ ಪ್ರಿಯಾಂಕ್ ಜಾರಕಿಹೊಳಿ ಬಿಡುಗಡೆಗೊಳಿಸಿದರು.

ಇಲ್ಲಿನ ಕಣಬರ್ಗಿ ಮಹೇಶ ಪೌಂಡೇಶನ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ, ಸ್ವಾಮಿ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ವೆಬ್ ಸೈಟ್ ಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ರಾಹುಲ್ ಜಾರಕಿಹೊಳಿ, ಸಮಾಜದ ಸೌಲಭ್ಯ ವಂಚಿತ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ ಮಹೇಶ ಫೌಂಡೇಶನ ಕೊಡುಗೆ ಅಪಾರವಾಗಿದೆ. ಮುಂದೆ ಕೂಡ ಹೀಗೆ ಜನರ ಕಷ್ಟಗಳಿಗೆ ಈ ಸಂಸ್ಥೆ ಸ್ಪಂದಿಸಲಿ ಎಂದು ಶುಭ ಹಾರೈಸಿದರು.

ಮಹೇಶ ಫೌಂಡೇಶನ ಪ್ರಯತ್ನ ವೈಬ್ ಸೈಟ್ ಮೂಲಕವಾಗಿ ಬಡ ನೇಕಾರರು ತಯಾರಿಸಿದ ಸೀರೆಗಳನ್ನು ಮಾರಾಟ ಮಾಡಿ ಉತ್ತಮ ವೇದಿಕೆ ನಿರ್ಮಿಸಿಕೊಟ್ಟಿದೆ. ವಿಶೇವಾಗಿ ಮಹಿಳಾರಿಗಾಗಿ ಬಡವರಿಗೆ, ನಿರ್ಗತಿಕರಿಗೆ ಈ ಅಪಾರ ಕೊಡುಗೆ ನೀಡುತ್ತಿದೆ- ಪ್ರಿಯಾಂಕಾ ಜಾರಕಿಹೊಳಿ

ಮಹೇಶ್ ಫೌಂಡೇಶನ್ ಸ್ಥಾಪಕ ಮಹೇಶ ಜಾಧವ್, ಆನಂಧ ಪಾಟೀಲ್ ,ಫೌಂಡೇಶನ್ ನ ಮಕ್ಕಳು, ಸಿಬ್ಬಂದಿ ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.

Leave A Reply

Your email address will not be published.