ಮಕ್ಕಳನ್ನು ಸಮಾಜದ ಮುಖ್ಯವಾಹಿತಿ ತರುವ ಕಾರ್ಯ

ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

0 120
ಬೆಳಗಾವಿ: ರಾಜ್ಯದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರುವದ ಜತೆಗೆ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಮಕ್ಕಳನ್ನು ಸಮಾಜದ ಮುಖ್ಯವಾಹಿತಿ ತರುವ ಕಾರ್ಯ ಮಾಡಲಾಗುತ್ತಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ  ಸಿಸ್ಟರ್ ಲೂರ್ದ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಹಾಗೂ ಬೆಳಗಾವಿ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಏಕ ಪೋಷಕ, ಅನಾಥ, ಲೈಂಗೀಕ ದೌರ್ಜನ್ಯಕ್ಕೊಳಗಾದ,  ಲೈಂಗೀಯ  ಚಟುವಟಿಯೆಲ್ಲಿ ತೊಡಗಿದ್ದ ಮಹಿಳೆಯ ಮಕ್ಕಳು ಹಾಗೂ ಹೆಚ್‌ಐವಿ ಪೀಡಿತ ಮಕ್ಕಳಿಗೆ ಸರ್ಕಾರಿಂದ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಅವಶ್ಯಕತೆಗೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ  ನೀಡುವುದು ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ಬಂದಂತ ಮಕ್ಕಳನ್ನು  ಪೋಷಕರಿಗೆ ಒಪ್ಪಿಸುವವರೆಗೆ ಕಲ್ಯಾಣ ಸಮೀತಿ ಕಾರ್ಯ ಮಾಡುತ್ತದೆ ಎಂದು ತಿಳಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಕರ್ನಾಟಕದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕೆ ಹೊಸ ಹೊಸ ಯೋಜನೆ ತರುವದರ ಮೂಲಕ ಶ್ರಮೀಸುತ್ತಿದೆ. ಜಿಲ್ಲೆಯಲ್ಲಿ ೬೮ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿಯ ಅಭಿರಕ್ಷಣೆಗೆ ಬಂದಿವೆ. ಈ ವೇಳೆ ಆಪ್ತ ಸಮಾಲೋಚನೆ, ಸರ್ಕಾರಿ ಸೌಲಭ್ಯ, ಶಿಕ್ಷಣ, ರಕ್ಷಣೆ ಮತ್ತು ಪೋಷಣೆ ಮಾಡಲಾಗುತ್ತಿದೆ. ಈ ಹಿಂದೆ ಭಯದಿಂದ ದೌರ್ಜನ್ಯ ಮತ್ತು ಸಮಸ್ಯೆಯಾದಲ್ಲಿ ಮುಚ್ಚಿಹಾಕಲಾಗುತ್ತಿರುವ ಬಗ್ಗೆ ಕೇಳಿದ್ದೇವೆ. ಆದರೆ ಮಹಿಳೆ ಮತ್ತು ಮಕ್ಕಳು ಧೈರ್ಯದಿಂದ ಮುಂದೆ ಬಂದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ದೇವದಾಸಿ ಪುನರ್ವಸತಿ ಯೋಜನೆ ಅಧಿಕಾರಿ ಎಂ.ಕೆ.ಕುಲಕರ್ಣಿ ಮಾತನಾಡಿ, ದೇವದಾಸಿಯರ ಹೆಣ್ಣು ಮಕ್ಕಳನ್ನು ಮದುವೆಯಾದವರಿಗೆ ಐದು ಲಕ್ಷ ರೂ. ಹಾಗೂ ಗಂಡು ಮಕ್ಕಳಿಗೆ ಮೂರು ಲಕ್ಷ ರೂ. ಸರಕಾರದಿಂದ ನೀಡಲಾಗುತ್ತಿದೆ. ಶಿಕ್ಷಣದಿಂದಲೇ ದೇವದಾಸಿ ಪದ್ದತಿ ಸೇರಿದಂತೆ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಬಹುದು. ೧೯೯೪ ರಲ್ಲಿ ನಡೆದ ಸರ್ವೇಯಲ್ಲಿ ೩,೬೦೦ ಜನ ದೇವದಾಸಿಯರು ಇದ್ದಾರೆ ಎಂಬ ಮಾಹಿತಿ ಗೊತ್ತಾಗಿತ್ತು. ಅದರಲ್ಲಿ ಕೆಲವರು ಹೆಸರು ಪಟ್ಟಿಯಲ್ಲಿರಲಿಲ್ಲ. ಅದಕ್ಕಾಗಿ ಮತ್ತೆ ಸರಕಾರ ೨೦೦೭ರಲ್ಲಿ ಪುನಃ ಸರ್ವೇ ಮಾಡಿದ ಸಂದರ್ಭದಲ್ಲಿ ೧,೨೨೪ ಜನ ದೇವದಾಸಿಯರು ಪತ್ತೆಯಾಗಿದೆ. ಅವರಿಗೆ ಮಾಶಾಸನ ನೀಡಲಾಗುತ್ತಿದೆ. ಜತೆಗೆ ಮನೆ ಕಟ್ಟಿಕೊಡಲು ವಿವಿಧ ಆಶ್ರಯ ಯೋಜನೆಯಡಿ ಬಹುತೇಕರಿಗೆ ಮನೆ ನೀಡಲಾಗಿದೆ. ೫೦ ಜನರಿಗೆ ಮಾತ್ರ ಮನೆ ಮತ್ತು ನಿವೇಶನ ನೀಡಿಲ್ಲ. ಸದ್ಯದಲ್ಲಿ ಮನೆ ಮತ್ತು ನಿವೇಶನ ನೀಡಲಾಗುವುದು ಎಂದರು.  ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ಯೋಜನಯಡಿ ೧ ಲಕ್ಷ ರೂಪಾಯಿ ನೀಡಲಾಗಿದೆ. ಇದೇ ರೀತಿ ಅನೇಕ ಯೋಜನೆಗಳ ಮೂಲಕ ದೇವದಾಸಿಯರ ಅಭಿವೃದ್ಧಿ ಶ್ರಮಿಸಲಾಗುತ್ತಿದೆ. ೧೯೯೨ರ ನಂತರ ದೇವದಾಸಿಯರು ಆಗಲು ಅವಕಾಶವಿಲ್ಲ. ಅಂಥವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ನೀಡಲು ಅವಕಾಶವಿದೆ. ಅರ್ಹರು ಮಾತ್ರ ಸರಕಾರ ಅನೇಕ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸೇವಕ ಸಂಸ್ಥೆಯ ಕಾರ್ಯದರ್ಶಿ ಆನಂದ ಲೋಬೊ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ೨೭ ಗ್ರಾಮಗಳಲ್ಲಿ ನಡೆದ ಸರ್ವೇಯಲ್ಲಿ ೬೦೮ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗಿದ್ದಾರೆ. ೧೩ ವರ್ಷದ ಮಕ್ಕಳನ್ನು ಮದುವೆ ಮಾಡುತ್ತಿದ್ದಾರೆ. ಅಂತಹ ಮಕ್ಕಳು ಮುಂದಿನ ಜೀವನದಲ್ಲಿ ಅಪೌಷ್ಟಿಕತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ತಾಯಿ ಮರಣಕ್ಕೆ ಬಾಲ್ಯ ವಿವಾಹವೇ ಕಾರಣವಾಗಿದೆ. ಈ ರೀತಿಯ ಸಮಾಜ ಪೀಡುಗನ್ನು ಶಿಕ್ಷಣ ದೂರ ಮಾಡಬಹುದು. ಹಾಗಾಗಿ ಸರ್ಕಾರ ಶಿಕ್ಷಣಕ್ಕೆ ಹಚ್ಚಿನ ಒತ್ತು ನೀಡಬೇಕಿದೆ ಎಂದರು.
ಅಮ್ಮ ಫೌಂಡೇಶನ ಕಾರ್ಯದರ್ಶಿ ಶೋಭಾ ಗಸ್ತಿ ಮಾತನಾಡಿ, ದೇವದಾಸಿ ಪದ್ದತಿ ಮೂಢನಂಬಿಕೆಯಿಂದ ಬಂದಿದ್ದು, ಅದು ಕೇವಲ ಎರಡು ಜಾತಿಗೆ ಸಿಮೀತವಾಗಿರುವ ಈ ಅನಿಷ್ಠ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯಬೇಕು. ಇಂದು ಮುಂದುವರೆದ ಸಮಾಜಯದಲ್ಲಿ ಈ ಪದ್ದತಿ ಇನ್ನೂ ಜೀವಂತವಾಗಿರುವುದು ವಿಷಾಧನೀಯ ಸಂಗತಿ. ಜಿಲ್ಲೆಯಲ್ಲಿ ೩೬೦೦ ದೇವದಾಸಿಯರು ಜಿಲ್ಲೆಯಲ್ಲಿರುವ ಬಗ್ಗೆ ಸಮೀಕ್ಷೆಯಲ್ಲಿ ಹೇಳಲಾಗಿದೆ. ಇನ್ನೂ ಹಲವು ಸಮೀಕ್ಷೆಯಿಂದ ಹೊರಗುಳಿದಿರುವುದರಿಂದ ಮರು ಸಮೀಕ್ಷೆ ನಡೆಸಿ ಸರ್ಕಾರ, ಸಹಾಯ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ  ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ್ ಮಠದ ಮಾತನಾಡಿ,  ಅನಾದಿಕಾಲದಿಂದ ಹಲವು ಅನಿಷ್ಠ ಪದ್ಧತಿಗಳು ಜಾರಿಯಲ್ಲಿರುವ ದೇವದಾಸಿ ಪದ್ಧತಿ, ಬಾಲ್ಯವಿವಾಹ ಹಾಗೂ ಭ್ರಷ್ಟಾಚಾರ ಈ ಮೂರು ಪೀಡುಗಳು ಸಮಾಜಕ್ಕೆ ಪೆಡಂಬುತವಾಗಿ ಕಾಡುತ್ತಿವೆ. ಸಮಾಜಕ್ಕೆ ಮಾರಕವಾಗಿರುವ ಪದ್ದತಿಗಳನ್ನು ನಿರ್ಮೂಲನೆ ಮಾಡಬೇಕೆಂದಲ್ಲಿ  ಎಲ್ಲರೂ ಸುಶಿಕ್ಷಿತರಾಗಿ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂದೆ ಮಂದು ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ದೇವದಾಸಿಯರು ಹಾಗೂ ಅವರ ಮಕ್ಕಳು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ  ಮಕ್ಕಳ ಕಲ್ಯಾಣ ಅಧಿಕಾರಿ ರವಿ ರತ್ನಾಕರ, ಸಿಆರ್‌ಟಿ ಸಂಸ್ಥೆ ವೆಂಕಟೇಶ ಟಿ., ಸುಂದರವ್ವ, ಪತ್ರಕರ್ತ ಗೋಪಾಲ ಕಟಾವಕರ ಸೇರಿದಂತೆ ಮೊದಲಾದವರು ಮಾತನಾಡಿದರು.

Leave A Reply

Your email address will not be published.