ಕೋವಿಡ್ ಮಾರ್ಗ ಸೂಚಿ ರೂಲ್ಸ್ ಮಾಡಿದವರೇ ರೂಲ್ಸ್ ಬ್ರೇಕ್
ಬಿಜೆಪಿ ನಾಯಕರ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ
ಬೆಳಗಾವಿ: ಕೋವಿಡ್ ಮಾರ್ಗ ಸೂಚಿ ರೂಲ್ಸ್ ಮಾಡಿದವರೇ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ ಅಂತಾ ಬಿಜೆಪಿ ನಾಯಕರ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರಿಗೊಂದು ನಿಯಮ, ಇವರಿಗೊಂದು ನಿಯಮ ಇಲ್ಲ. ಜಿಲ್ಲಾ ಕ್ರೀಡಾಂಗಣದಲ್ಲಿ 4 ಲಕ್ಷ ಜನರ ಸೇರಿಸುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಅಲ್ಲಿ ನಾವು ಈ ಹಿಂದೆ ಅನೇಕ ಸಭೆ ಮಾಡಿದ್ದೇವೆ. ಆ ಸ್ಟೇಡಿಯಂನಲ್ಲಿ 50 ಸಾವಿರ ಜನರ ಕೆಪ್ಯಾಸಿಟಿ ಇದೆ. 50 ಸಾವಿರ ಜನ ಸೇರುವುದು ಕೂಡ ಕೋವಿಡ್ ನಿಯಮ ಉಲ್ಲಂಘನೆಯಾಗಲಿದೆ. ಕೂಡಲೇ ಕೋವಿಡ್ ಮಾರ್ಗಸೂಚಿಯನ್ನು ರದ್ದು ಮಾಡಬೇಕು ಇಲ್ಲವೇ ಬಿಜೆಪಿ ಸಮಾವೇಶವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ತೊರೆದು ಹೋದವರು ಮರಳಿ ಪಕ್ಷಕ್ಕೆ ಬರುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಸದ್ಯ ಅಂತಹ ವಾತಾವರಣವಿಲ್ಲ. 2023ರಕ್ಕೆ ಎಲ್ಲ ಗೊತ್ತಾಗತ್ತೆ, ಆ ಪಕ್ಷದವರು ಈ ಪಕ್ಷಕ್ಕೆ ಈ ಪಕ್ಷದವರು ಆಕಡೆ ಹೋಗುತ್ತಾರೆ. ಕಾದು ನೋಡೋಣ ಎಂದರು.
ನಾವು ಸ್ಪರ್ಧಿಸಬೇಕು ಎಂದು ಹೈಕಮಾಂಡ್ ನಿಂದ ಒತ್ತಡವಿಲ್ಲ. ಬೆಳಗಾವಿ ಲೋಕಸಭಾ ಅಭ್ಯರ್ಥಿಯನ್ನು ಈ ತಿಂಗಳ ಕೊನೆಯವರೆಗೆ ಅಂತಿಮವಾಗಲಿದೆ. ಜಿಲ್ಲಾ ಕಮಿಟಿಯಿಂದ ನಾವೇ ಅಂತಿಮವಾಗಿ ಒಂದು ಹೆಸರು ನೀಡುತ್ತೇವೆ ಅದೇ ಫೈನಲ್ ಆಗಲಿದೆ.
2023 ರ ಸಿಎಂ ಅಭ್ಯರ್ಥಿ ನಾನಲ್ಲ. ಆರಾಮವಾಗಿ ಜನರ ಮಧ್ಯೆ ಓಡಾಡಿಕೊಂಡಿದ್ದೇವೆ. 2023 ಚುನಾವಣೆಯಲ್ಲ, ಬಳಿಕ( ನೆಕ್ಸ್ಟ್) ಅಂತಾ ಹೇಳಿದ್ದೇನೆ. ಮುಂದೆ ನಮ್ಮ ಸರತಿ ಬರಲಿದೆ ಎಂದರು.