ಗೋವಾದಲ್ಲಿನ ಚುನಾವಣೆ ಕಣ ಚಿತ್ರಣವನ್ನೇ ಬದಲಿಸಿದ ಲಕ್ಷ್ಮಿ ಹೆಬ್ಬಾಳಕರ್

ಅರಿಸಿಣ, ಕುಂಕುಮ ನೀಡಿ, ಉಡಿ ತುಂಬಿ ಹಾರೈಸುತ್ತಿರುವ ಮಹಿಳೆಯರು ; ಚುನಾವಣೆ ಕಣಕ್ಕೆ ಭಾವನಾತ್ಮಕ ಸ್ಪರ್ಷ

0 75

ಪಣಜಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಂಗಳಗಾವಿ ಗೋವಾ ವಿಧಾನಸಭೆಯ ಚುನಾವಣೆಯ ಪ್ರಚಾರ ಕಾರ್ಯವನ್ನು ಆರಂಭಿಸಿದರು.
ಕೊರ್ತಾಲಿಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಒಲ್ಯಾನ್ಸಿಯೋ ಸಿಮೋಸ್ ಪರವಾಗಿ ಹೆಬ್ಬಾಳಕರ್ ಮತ ಯಾಚಿಸಿದರು.
ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರಕ್ಕೆ ಪ್ರವೇಶ ನೀಡುತ್ತಿದ್ದಂತೆ ಅಲ್ಲಿಯ ಚಿತ್ರಣವೇ ಬದಲಾಗಿದೆ. ಅಲ್ಲಿನ ಜನರು ಅದರಲ್ಲೂ ವಿಶೇಷವಾಗಿ ಮಹಿಳೆೆಯರು ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ತಮ್ಮ ಮನೆಯ ದೇವರ ಕೊಣೆಯವರೆಗೂ ಕರೆಸಿಕೊಂಡು ಅರಿಸಿಣ ಕುಂಕುಮ ನೀಡಿ, ಉಡಿ ತುಂಬಿ ಹರಸುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳಕರ್ ಅವರ ಮಾತು ಕೇಳಲು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರು, ಮಕ್ಕಳು ನುಗ್ಗಿ ಬರುತ್ತಿದ್ದಾರೆ. ಹಿರಿಯರು ಪ್ರೀತಿಯಿಂದ ಮನೆಮಗಳಂತೆ ಕಾಣುತ್ತಿದ್ದಾರೆ. ತನ್ಮೂಲಕ ಕ್ಷೇತ್ರದಲ್ಲಿ ಭಾವನಾತ್ಮಕತೆಯ ಸ್ಪರ್ಷ ನೀಡಿದ್ದಾರೆ.

ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಯಾದ ಒಲ್ಯಾನ್ಸಿಯೋ ಸಿಮೋಸ್, ಬ್ಲಾಕ್ ಅಧ್ಯಕ್ಷರುಗಳಾದ ಆಂಡ್ರಿಯಾ, ನಿಲೇಶ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.