ರಾಜ್ಯಾದ್ಯಂತ ಡ್ರಗ್ಸ್ ಪ್ರಕರಣ ತನಿಖೆಗೆ ಆಗ್ರಹ

ಧಾರವಾಡದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಗ್ರಹ

0 26

ಧಾರವಾಡ:  ಡ್ರಗ್ಸ್ ಪ್ರಕರಣ ರಾಜ್ಯಾದ್ಯಂತ ತನಿಖೆ ಆಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ  ಒತ್ತಾಯಿಸಿದ್ದಾರೆ.

ಡ್ರಗ್ಸ್ ವಿಚಾರವಾಗಿ  ನಗರದಲ್ಲಿ  ಶನಿವಾರ ಮಾಧ್ಯಮದವರೊಂದಿಗೆ  ಪ್ರತಿಕ್ರಿಯಿಸಿದ ಅವರು, ಪ್ರಕರಣ ತನಿಖೆ ಬೇಗ ಬೇಗ ಮಾಡಬೇಕಿತ್ತು.ಕೆಲವು ಕಡೆ ಒಳ್ಳೆಯ ರೀತಿಯಿಂದ ತನಿಖೆ ನಡೆದಿದೆ .  ಇನ್ನೂ ಕಾಲ ಮೀರಿಲ್ಲ.  ರಾಜ್ಯಾದ್ಯಂತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರು.

ಎಐಸಿಸಿ ಕಾರ್ಯಕಾರಿ ಸಮಿತಿ ಬದಲಾವಣೆ ವಿಚಾರ ಮಾತನಾಡಿ,  ಕೆಲಸ ಮಾಡುವ ಹೊಸಬರ ಅವಶ್ಯಕತೆ ಇದೆ. ಇದುವರೆಗೂ ಪಕ್ಷಕ್ಕಾಗಿ  ಕೆಲಸ ಮಾಡಿದ  ಹಳಬರು ಇದ್ದಾರೆ.  ಸುಮಾರು 50 ರಿಂದ 60 ವರ್ಷದಿಂದ ಪಕ್ಷಕ್ಕೆ   ನಿಷ್ಠಾವಂತರಾಗಿ  ಕೆಲಸ ಮಾಡಿದ್ದಾರೆ. ಆದರೂ ಅವರನ್ನೆಲ್ಲ ಕೈ ಬಿಟ್ಟಿಲ್ಲ. ಬೇರೆ ಬೇರೆ ಪೋಸ್ಟ್‌ಗಳು, ಕಮಿಟಿಗಳಿವೆ ಅವುಗಳಿಗೆ ಅವರನ್ನು ಉಪಯೋಗ ಮಾಡುತ್ತಾರೆ ಎಂದು ತಿಳಿಸಿದರು.

ಧಾರವಾಡದಲ್ಲಿನ ನೀರಾವರಿ ನಿಗಮ  ಬೆಳಗಾವಿಗೆ ಸ್ಥಳಾಂತರಿಸಿರೋ ವಿಚಾರವನ್ನು ಆಡಳಿತದಲ್ಲಿರುವವರಿಗೆ ಕೇಳಬೇಕು
ಇದಕ್ಕೆಲ್ಲ ಅವರೇ ಉತ್ತರಿಸಬೇಕು ಎಂದರು.

Leave A Reply

Your email address will not be published.