ಬೆಳಗಾವಿ: ಇತ್ತೀಚೆಗಷ್ಟೆ ಖಾನಾಪುರ ಪೊಲೀಸ್ ತರಬೇತಿ ಶಾಲೆಗೆ ವರ್ಗಾವಣೆ ಗೊಂಡಿದ್ದ ನಾರಾಯಣ ಬರಮನಿ ಅವರನ್ನು ಮರಳಿ ಬೆಳಗಾವಿ ಅಪರಾಧ ವಿಭಾಗದ ಎಸಿಪಿಯನ್ನಾಗಿ ನೇಮಕಗೊಳಿಸಿ ಶನಿವಾರ ಸರಕಾರ ಆದೇಶ ಹೊರಡಿಸಿದೆ.
ಬರಮನಿ ಅವರು ನಗರದ ಮಾರ್ಕೆಟ್ ಠಾಣೆ ಎಸಿಪಿ ಹುದ್ದೆಯಿಂದ ಖಾನಾಪೂರ ತಾಲೂಕಿನ ಪೋಲೀಸ್ ತರಬೇತಿ ಶಾಲೆಗೆ ವರ್ಗಾವಣೆಯಾಗಿದ್ದರು. ಇದೀಗ ಸರಕಾರ ಅವರನ್ನು ಬೆಳಗಾವಿ ಕ್ರೈಂ ಎಸಿಪಿ ಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.