ಬಿಜೆಪಿ ನಾಯಕರೂ ಅಫೀಮು ಗುಂಗಿಲ್ಲದೇ ಹೊರಬರುತ್ತಿರಲಿಲ್ಲ:  ಹರಿಪ್ರಸಾದ 

0 51

ಬೆಳಗಾವಿ:  ಬಿಜೆಪಿ ದೊಡ್ಡ ನಾಯಕರು ಅಫೀಮು ಗುಂಗಿಲ್ಲದೇ ಹೊರ ಬರುತ್ತಿರಲಿಲ್ಲ ಎಂದು ರಾಜ್ಯ ಸಭಾ ಸದಸ್ಯ ಬಿ. ಕೆ ಹರಿಪ್ರಸಾದ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ,  ಆರ್ ಎಸ್ ಎಸ್ ವಿರುದ್ಧ ಕಿಡಿ ಕಾರಿದ್ದಾರೆ.  ಕೋವಿಡ್ ನಿರ್ವಹಣೆ ಯಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಡ್ರಗ್ಸ್ ಪ್ರಕರಣದ ಹಿಂದೆ ಬಿದ್ದಿದೆ ಎಂದು ಆರೋಪಿಸಿದರು.  ಆರ್ ಎಸ್ ಎಸ್ ಗೂ ಕಾಂಗ್ರೆಸ್ ತರಬೇತಿ ಶಿಬಿರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ.ಆರ.ಎಸ.ಎಸ ತರಹ ನಮ್ಮ ಶತ್ರುಗಳನ್ನು ಸಹ ತಯಾರು ಮಾಡಲ್ಲ. ಆರ.ಎಸ.ಎಸ ತರಹ ಸಂಘಟನೆ ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿಲ್ಲ.
ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಅಡಿಯಲ್ಲಿ, ಪಕ್ಷದ ಇತಿಹಾಸ ಇಟ್ಟುಕೊಂಡು ದೇಶದ ಅಭಿವೃದ್ಧಿಗಾಗಿ ಕೈ ಕಾರ್ಯಕರ್ತರನ್ನ ತಯಾರು ಮಾಡುತ್ತೇವೆ.
ಕಾಂಗ್ರೆಸ್ ಪಕ್ಷ ಲಾಠಿ ಹಿಡಕೊಂಡರೇ ಬೇರೆದವರಿಗೆ ಸಹಾಯವಾಗುತ್ತದೆ ಹೊರತು ಬೇರೆ ಸಂಘಟನೆಗಳು ಲಾಠಿ ಹಿಡಕೊಂಡರೆ ಬಾಯಿ ಬಿಡಿಸುವ ಕೆಲಸ ಮಾಡ್ತಾರೆ.
ಆ ಸಂಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.

Leave A Reply

Your email address will not be published.