ಕಾಂಗ್ರೆಸ್ಸಿನಲ್ಲೇ ದೇಶದ್ರೋಹಿಗಳು ಜಾಸ್ತಿ- ಕೃಷಿ ಸಚಿವ ಬಿ.ಸಿ.ಪಾಟೀಲ ಟೀಕೆ

0 29

ಬೆಳಗಾವಿ: ಬಿಜೆಪಿ ನಾಯಕರು ಅಫೀಮು ಸೇವಿಸುತ್ತಾರೆ ಎಂಬ ಟೀಕೆ ಮಾಡಿರುವ ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿಕೆ ವೇದ ವಾಕ್ಯವಲ್ಲ. ಅವರೇನೂ ಬ್ರಹ್ಮನಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬಿಜೆಪಿ ನಾಯಕರು ಅಫೀಮು ಸೇವಿಸುವುದನ್ನು ಹರಿಪ್ರಸಾದ ಯಾವಾಗ ನೋಡಿದ್ದಾರೆ? ಇಷ್ಟು ದಿನ ಏಕೆ ಬಾಯಿ ಮುಟ್ಟಿಕೊಂಡಿದ್ದರು. ಮೋದಲೇ ಹೇಳಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ರೀತಿ ನಾವು ಶತ್ರುಗಳನ್ನು ಸೃಷ್ಟಿ ಮಾಡಲ್ಲ ಎಂದು ಹರಿಪ್ರಸಾದ ಹೇಳಿಕೆ ನೀಡಿದ್ದಾರೆ. ಎಸ್‌ಡಿಪಿಐ ಮಾಡ್ತಾರಾ? ಕೆ.ಜೆ.ಹಳ್ಳಿ. ಡಿಜೆ ಹಳ್ಳಿ ಗಲಾಟೆ ಮಾಡಿದವರು ಯಾರು? ಗಲಾಟೆ ಎಲ್ಲಿಂದ ಆಗಿದೆ? ಶತ್ರುಗಳನ್ನು ತಯಾರು ಮಾಡುತ್ತಿರುವವರು ಅವರೇ. ಕಾಂಗ್ರೆಸ್ಸನಲ್ಲೇ ದೇಶದ್ರೋಹಿಗಳು ಜಾಸ್ತಿ ಜನ ಇದ್ದಾರೆ. ಅವರನ್ನು ಬಚಾವ್ ಮಾಡಲು ಎಷ್ಟೋ ಜನರ ಪ್ರಾಣ ಹೋಗಿದೆ. ಆಸ್ತಿಪಾಸ್ತಿ ನಷ್ಟ ಆಗಿದೆ. ಕೋಮುಗಲಭೆಗೆ ಪ್ರಚೋದನೆ ನೀಡುತ್ತಾರೆ ಎಂದು ಟೀಕಿಸಿದರು.
ಮೋದಿ, ಬಿಎಸ್ ಯಡಿಯೂಪರಪ್ಪ ಸರ್ಕಾರ ವೈಫಲ್ಯ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಹರಿಪ್ರಸಾದ ಟೀಕಿಸಿರುವುದನ್ನು ಖಂಡಿಸಿದ ಅವರು, ಮೋದಿ ಸರ್ಕಾರದ ಬಗ್ಗೆ ಪ್ರಶ್ನೆ ಮಾಡುವ ಯೋಗ್ಯತೆ ಕಾಂಗ್ರೆಸ್‌ಗೆ ಇಲ್ಲ ೫೦ ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರಬೇಕಾಗುತ್ತದೆ ಎಂದು ಗುಲಾಂನಬಿ ಆಜಾದ್‌ಅವರೇ ಹೇಳಿದ್ದಾರೆ. ಕಾಂಗ್ರೆಸ್‌ನ ಹಿರಿಯ ಧುರೀಣರೇ ಒಪ್ಪಿಕೊಂಡಿದ್ದಾರೆ. ಹೀಗಿರುವಾಗಬಿಜೆಪಿ ಸರ್ಕಾರದ ವೈಫಲ್ಯ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಕೋವಿಡ್ ನಿರ್ವಹಣೆ ಮುಚ್ಚಿಹಾಕುವ ಅವಶ್ಯಕತೆ ಇಲ್ಲ. ಕೋವಿಡ್ ನಿರ್ವಹಣೆಯನ್ನು ಸಮರ್ಥವಾಗಿ ನಿಭಿಯಿಸಲಾಗಿದೆ. ಸ್ಯಾಂಡಲ್‌ವುಡ್, ಟಾಲಿವುಡ್, ಬಾಲಿವುಡ್ ಎಲ್ಲಾ ವುಡ್‌ಗಳಲ್ಲಿ ನಶೆ ಇದ್ದೇ ಇದೆ.
ಅದನ್ನು ಬಳಕೆ ಮಾಡೋ ವ್ಯಕ್ತಿಗಳ ಚಾರಿತ್ರ್ಯ ಬಗ್ಗೆ ಯೋಚನೆ ಮಾಡಬೇಕು . ಡ್ರಗ್ಸ್ ಮಾಫಿಯಾದಲ್ಲಿ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

Leave A Reply

Your email address will not be published.