ಬಿಜೆಪಿ ಕಚೀರಿಗೆ ಸಚಿವ ಬಿ.ಸಿ.ಪಾಟೀಲ ಭೇಟಿ

0 28

ಬೆಳಗಾವಿ:  ಖ್ಯಾತ ಕಲಾವಿದರು ಜನತಾ ಪಾರ್ಟಿಯ ನಾಯಕರು, ಕರ್ನಾಟಕ ರಾಜ್ಯದ ಕೃಷಿ ಮಂತ್ರಿ  ಬಿ.ಸಿ. ಪಾಟೀಲ ಅವರು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ಪಕ್ಷದ ಪರವಾಗಿ ಸತ್ಕಾರ ಮಾಡಲಾಯಿತು. ಸತ್ಕಾರ ಸ್ವೀಕಾರ ಮಾಡಿದಂತಹ ಸಚಿವರು ಮಾತನಾಡುತ್ತಾ ಕಾರ್ಯಕರ್ತರು ಪಕ್ಷದ ಆಸ್ತಿ ಹಾಗೂ ರೈತರು ದೇಶದ ಬೆನ್ನೆಲುಬು
ನಿಮ್ಮೆಲ್ಲರ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ ಎಂದು ಹೇಳಿದರು
ರೈತರ ಬಗ್ಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಏನಾದರೂ ತೊಂದರೆ ಇದ್ದರೆ ನಮಗೆ ತಿಳಿಸಿ ಆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಸಂಜಯ ಪಾಟೀಲ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜು ಚಿಕ್ಕನಗೌಡರ ಸುಭಾಷ್ ಪಾಟೀಲ ಮಹೇಶ್ ಮೋಹಿತೆ. ರೈತ ಮೋರ್ಚಾದ ಪ್ರದೀಪ್ ಸಾಣಿಕೊಪ್ಪ, ವೀರಭದ್ರ ನೀತಿನ ಇತರೇ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave A Reply

Your email address will not be published.