ಸಂಸದ ಅನಂತಕುಮಾರ ಹೆಗ್ಡೆ ಸೇರಿ ೧೭ ಸಂಸದರಿಗೆ ಕೊರೋನಾ

0 72

ಹೊಸದೆಹಲಿ: ಮಹಾಮಾರಿ ಕೊರೋನಾ ವೈರಸ್ ಅಬ್ಬರದ ನಡುವೆಯೇ ಸೋಮವಾರದಿಂದ ಲೋಕಸಭೆ ಅಧಿವೇಶನ ಆರಂಭವಾಗಿದ್ದು, ಉತ್ತರ ಕನ್ನಡ ( ಕೆನರಾ) ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ೧೭ ಸಂಸದರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಅಧಿವೇಶನದ ಹಿನ್ನೆಲೆಯಲ್ಲಿ ಸಂಸದರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ೧೭ ಸಂಸದರಿಗೆ ಕೊರೋನಾ ಸೋಂಕು ತಗುಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೂ ಕೊರೋನಾ ಸೋಂಕು ತಗುಲಿತ್ತು. ಸೋಂಕಿತ ಸಂಸದರ ಪೈಕಿ ೧೨ ಜನ ಬಿಜೆಪಿ, ವೈಎಸ್‌ಆರ್ ಕಾಂಗ್ರೆಸ್-೨, ಶಿವಸೇನೆಯ ೨ ಮತ್ತು ಡಿಎಂಕೆ ಓರ್ವ ಸಂಸದರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕು ಕಾಣಿಸಿಕೊಂಡಿರುವ ಸಂಸದರಿಗೆ ಸಂಸತ್ ಪ್ರವೇಶ ನಿರಾಕರಿಸಲಾಗಿದೆ.

Leave A Reply

Your email address will not be published.