ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡ

ಪುಸ್ತಕ ಪರಿಚಯ

0 206

ಪುಸ್ತಕ ಪರಿಚಯ
ಪುಸ್ತಕದ ಹೆಸರು : ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ
ಕರ್ಮಕಾಂಡ
ಲೇಖಕರು : ಆಗುಂಬೆ ಎಸ್ ನಟರಾಜ್
ಮೊದಲ ಮುದ್ರಣ : 2020 ಅಗಷ್ಟ ಪುಟ 290+12
ಬೆಲೆ : 250,
ಪ್ರಕಾಶಕರು : ಎ.ಎಸ್.ಬಿ ಮೆಮೋರಿಯಲ್ ಟ್ರಸ್ಟ್ 10
ಮುದ್ರಕರು : ಹೆಗ್ಗದ್ದೆÉ ಪ್ರಕಾಶನ ಬೆಂಗಳೂರು.

ಭಾರತದ ವಿಭಜನೆ ಜರುಗಿ 73 ವರ್ಷಗಳು ಸಂದಿವೆ. ವಿಭಜನೆಯ ಕುರಿತು ಹಲವಾರು ಪುಸ್ತಕಗಳು, ವಿಮರ್ಶೇಗಳು ಅಭಿಪ್ರಾಯಗಳು ಹೊರಂಬದಿವೆ. ಪ್ರಸಿದ್ಧ ಇಂಗ್ಲೀಷ ಕವಿ ಟಿ.ಎಸ್. ಎಲಿಯಟನ್ ಪ್ರಕಾರ ‘ಹಿಂದಿನ’ ಸಾಹಿತ್ಯವನ್ನು ಮತ್ತೊಮ್ಮೆ ಪರಿಶೀಲಿಸಿ ಹೊಸ ಕ್ರಮದಲ್ಲಿ ನೆಲೆಗೊಳಿಸುವ ಕಾರ್ಯ ಕ್ರಾಂತಿಕಾರಿಯಾಗದೆ. ಅದು ಪುನರ್ ವಿಂಗಡನೆ ಯಾಗುತ್ತದೆ.
ಆಗುಂಬೆ ನಟರಾಜರು ಭಾರತದ ವಿಭಜನೆಯ ಬಗ್ಗೆ ಪುನರ್ ವಿಂಗಡನೆ, ವಿಮರ್ಶೇ, ಆಭಿಪ್ರಾಯ ಆಧಾರಗಳು ಸಮೇತ ಈ ಗ್ರಂಥವನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಧರ್ಮದ ಆಧಾರದ ಮೇಲೆ ಭಾರತವೆಂಬ ಬಹು ಸಂಸ್ಕøತಿ, ಭಾಷೆ, ಧರ್ಮಗಳಿರುವ ದೇಶ ವಿಭಜನೆಯಾದ ನಂತರ ಅದರ ಹೊಸ ಹುಟ್ಟು ಯಾವ ರೀತಿಯಲ್ಲಿ ಅಸ್ತಿತ್ವದಲ್ಲಿದೆ ಮತ್ತು ಅದರ ಭವಿಷ್ಯದ ರೂಪಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎಂಬ ವಿಷಯದಲ್ಲಿ ಚಿಂತನೆಗೆ ಈಡು ಮಾಡಿದ್ದಾರೆ.
ದೇಶ ವಿಭಜನೆಯಿಂದಾದ ಅನಾಹುತ, ಲಕ್ಷಾಂತರ ಅಮಾಯಕರ ಹತ್ಯೆ ಮಹಿಳೆಯರ ಮೇಲೆ ಜರುಗಿದ ಅತ್ಯಾಚಾರ, ಮಾನಭಂಗ, ಅಗೌರವಗಳು, ಪುನರಾವರ್ತನೆಗೊಳ್ಳುವ ವಿರುದ್ಧ ದೇಶಿಯರು ಎಚ್ಚರಗೊಳಿಸುವ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ ಚರಿತ್ರೆಯ ಪುನರಾರ್ವನೆಯಾಗದಂತೆ ಮಾಡುವ ಅವಶ್ಯಕತೆ ಇಂದು ಉಂಟಾಗಿರುವುದನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಭಾರತದ ವಿಭಜನೆಯ ಮುಂದಿನ ಪಿಳಿಗೆಗೆ ನೀಡುವ ಪಾಠವೇನು ಎಂಬುದನ್ನು ಸರ್ವರೂ ಚಿಂತಿಸಬೇಕಾದ ಅವಶ್ಯಕತೆ ಉಂಟಾಗಿರುವ ಸಂಗತಿ ಮತ್ತು ಪ್ರಶ್ನೆಯನ್ನು ಗ್ರಂಥಕರ್ತರು ಹೇಳಿದ್ದಾರೆ.
ಆಗುಂಬೆ ನಟರಾಜರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪುಸ್ತಕಗಳಲ್ಲಿ ಈ ಪುಸ್ತಕವೂ ಸೇರ್ಪಡೆ ಆಗಿದೆ ಪ್ರಕಾಶಕರು ಈ ಪುಸ್ತಕದಲ್ಲಿ ಒಟ್ಟು ಹದಿನಾಲ್ಕು ಅಧ್ಯಾಯವಿದ್ದು ಒಂದನೇ ಅಧ್ಯಾಯದಲ್ಲಿ ಇದು ಭಾರತ, ಇದು ಹಿಂದುಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡವಿದ್ದು, ದೆಹಲಿ ಸುಲ್ತಾನರು, ರಾಷ್ಟ್ರೀಯ ಆಂದೋಲನ, ಮೊದಲ ಮಹಾಯುದ್ಧ, ಸ್ವಾತಂತ್ರ್ಯ ಸಂಗ್ರಾಮ, ಗಾಂಧೀಜಿಯ ಪ್ರವೇಶ ಬ್ರಿಟಿಷರು ಸ್ಥಾಪಿಸಿದ ಗುಲಾಮಗಿರಿ, ವ್ಯವಸ್ಥೆ, ಅಸಹಕಾರ ಹೋರಾಟ ದೇಶ ವಿಭಜನೆಯ ದುರಂತ ಕಥೆ. ಕೊನೆಯ ಹಂತ ಎರಡನೆಯ ಮಹಾಯುದ್ಧ ಭಾರತದ ವಿಭಜನೆ, ವಿಭಜನೆಯ ಪರಿಣಾಮಗಳು, ಬಾಂಗ್ಲಾ ದೇಶದ ಕಥೆ, ಜನಸಂಖ್ಯಾ ವಿನಿಮಯ, ಹಾಗೂ ಉಪಸಂಹಾರ ಹೀಗೆ 244 ಪುಟಗಳು ಇದ್ದು ಉತ್ತಮ ಮುದ್ರಣದಲ್ಲಿ ಪ್ರಕಟವಾಗಿದೆ.
ಭಾರತವೆಂಬ ಈ ಉಪಖಂಡದಲ್ಲಿ ಪ್ರಾಚೀನ ಕಾಲದಿಂದಲೇ ಭರತವರ್ಷೇ, ‘ಜಂಬೂದ್ವೀಪೇ’ ಎಂಬ ಹೆಸರನ್ನು ಸಂಸ್ಕøತ ಮಂತ್ರ ಪಠಣದಲ್ಲಿ ಕಾಣಬಂದಿದ್ದನ್ನು ಅವಲೋಕಿಸುವಾಗ ಈ ಪ್ರದೇಶವನ್ನು ಒಂದು ಪರ್ಯಾಯ ದ್ವೀಪವನ್ನಾಗಿ ದಾಖಲಿಸಿದ್ದನ್ನು ಕಾಣಬಹುದಾಗಿದೆ. ಈ ಪರ್ಯಾಯ ದ್ವೀಪವನ್ನು ಒಂದು ಸಮಗ್ರ ರಾಜಕೀಯ ಅಧಿಕಾರದಲ್ಲಿ ಆಳಲ್ಪಡುವ ಶಕ್ತಿ, ರಾಜ್, ಮಹಾರಾಜ, ಸಾಮ್ರಾಟರು ಸತತವಾಗಿ ಪರಿಶ್ರಮ ಪಟ್ಟಿರುವುದನ್ನು ಇತಿಹಾಸದ ಪುಟಗಳಲ್ಲಿ ಓದಬಹುದಾಗಿದೆ.
ಭಾರತ ದೇಶವನ್ನು ಸಂಪೂರ್ಣವಾಗಿ ಆಳಿ ಮೆರೆದವರಲ್ಲಿ ಮೌರ್ಯ ಸಾಮ್ರಾಟ ಚಂದ್ರಗುಪ್ತ ಮೌರ್ಯ ಎಂದು ಹೇಳಲಾಗಿದೆ. (ಕಿ.ಪೂ 321) ಅವನ ಪುತ್ರ ಬಿಂದುಸಾರ (ಕಿ.ಪೂ 297) ಆಳಿದ ಅವನ ಪುತ್ರ ಜಗತಪ್ರಸಿದ್ಧ ಅಶೋಕನ ಇತಿಹಾಸ ಮೃತ್ತಾಂತ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅಶೋಕನ ಕಾಲದಲ್ಲಿ ಕೂಡ ಭಾರತ ದೇಶ ಪರ್ಯಾಯವಾಗಿ ಅವರ ಆಡಳಿತಕ್ಕೆ ಒಳಪಡದಿರುವುದನ್ನು ಗಮನಿಸಿದಾಗ, ಭಾರತ ಒಬ್ಬನೆ ಒಬ್ಬ ಅಥವಾ ಒಂದೇ ಸಾಮ್ರಾಜ್ಯ ಆಳಲ್ಪಟ್ಟರದೇ ಇರುವುದನ್ನು ಗಮನಿಸಬಹುದಾಗಿದೆ. ಆಗ ಭಾರತ ಉಪಖಂಡದ, ದಕ್ಷಿಣ ಭಾಗದಲ್ಲಿ ಆಂಧ್ರ ಶೌತವಹಾನ, ಚೋಳ, ಪಾಂಡ್ಯ, ಕೇರಳ ರಾಜ್ಯಗಳು ಅಸ್ತಿತ್ವದಲ್ಲಿದ್ದವು.
ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನ ನಂತರ ಅವನ ಗೆದ್ದ ದೇಶದ ಗಡಿ ಭಾಗಗಳಲ್ಲಿ ಅವನ ದಳಪತಿ, ಸಾಮಂತರನ್ನು ನೇಮಿಸಿ, ತನ್ನ ಚಕ್ರಾಧಿಪತ್ಯವನ್ನು ಬಲಪಡಿಸುವ ಉದ್ದಶವಿರಿಕೊಂಡಿದ್ದರೂ ಅದು ಅಸಫಲಗೊಂಡಿದ್ದು ಅವನ ಮರಣದ ನಂತರ ಅವನ ಸಾಮಂತ ಗ್ರೀಕರು ಮಧ್ಯಪ್ರಾಂಚ್ಯದ ಬ್ಯಾಕ್ಟೀರಿಯಾ ಮತ್ತು ಇರಾನ್ ದೇಶಗಳನ್ನು ಸ್ವತಂತ್ರವಾಗಿ ಆಳತೊಡಗಿದರು (ಕ್ರಿ.ಪೂ 3) ಇವರ ಹೆಸರುಗಳಲ್ಲಿ ಡೈಯೋಡೋರಸ್, ಅಂಬೀಯೇರಸ್ ಸೆಲ್ಯೂಸಿಡ್ ಪ್ರಮುಖವಾಗಿವೆ. ಈ ಸೆಲ್ಯೂಸಿಡ್ ಹಿಂದೂ ರಾಜ ಸುಭಗಸೇನಾವನ್ನು ಸೋಲಿಸಿ ಗ್ರೀಕರ ರಾಜ್ಯವನ್ನು ಭಾರತದ ಪಶ್ಚಿಮ ಗಡಿ ಪ್ರದೇಶವನ್ನು ಆಕ್ರಮಣಕ್ಕೆ ಮುಕ್ತವಾಗಿಸಿದ (ಕ್ರಿ.ಪೂ 200) ಡೆಮೆಟ್ರಿಯಸ್ ಎಂಬ ಇನ್ನೋಬ್ಬ ಗ್ರೀಕ್ ಸಂಜಾತ ರಾಜ ಸೆಮ್ಯಗೆಡವನ್ನು ಸೋಲಿಸಿದ. ಈಗಿನ ಆಪ್ಘನ್ ಪ್ರದೇಶಗಳನ್ನು ಆಳತೊಡಗಿದ ಈತ ಕ್ರಮೇಣ ಪಂಜಾಬ್, ಸಿಂಧೂ ನದಿ ಪ್ರದೇಶ ಮತ್ತು ಗುಜರಾತನ ಕಬ್ ಪ್ರದೇಶಗಳಲ್ಲಿ ತನ್ನ ರಾಜ್ಯ ವಿಸ್ತರಿಸಿದ ಅವನಿಂದಲೇ ಗ್ರೀಕ್ ಭಾರತೀಯ ರಾಜವಂಶ ಸ್ಥಾಪನೆಗೊಂಡಿತು ಎಂದು ಹೇಳಲಾಗಿದೆ.
ಈಗಿನ ಪಾಕಿಸ್ತಾನದ ಸಿಂಧ್ ಪ್ರಾಂತವನ್ನು 8 ನೇ ಶತಮಾನದಲ್ಲಿ ಹಿಂದೂ ಬ್ರಾಹ್ಮಣ ಪಂಗಡದ ರಾಜ ದಾಹಿರ್ ಎಂಬಾತ ಆಳುತ್ತಿದ್ದ, ಆತನ ಕಾಲ ಕ್ರಿ. ಶ 663 -712 ಎಂದಿದ್ದಾರೆ. ಇತಿಹಾಸಕಾರರು ರಾಜ ದಾಹಿರ್ ಸಿಂಧನ ಕೊನೆಯ ಹಿಂದು ರಾಜ ಅವನು ಒಬ್ಬ ಬಲಿಷ್ಠ ರಾಜನಾಗಿದ್ದು ಅವನ ಆಳ್ವಿಕೆಯಲ್ಲಿ ಈಗಿನ ಪಾಕಿಸ್ತಾನದ ಬಲೂಚೀಸ್ತಾನ, ಅಫ್ಘಾನಿಸ್ತಾನ ಮತ್ತು ಪಂಜಾಬನ ಕೆಲವು ಭಾಗಗಳು ಸೇರಿದ್ದವು.
ಪ್ರತಿಯೊಬ್ಬ ಭಾರತೀಯರು ಇತಿಹಾಸ ಅರಿಯಲು ಈ ಪುಸ್ತಕ ಓದಲೇ ಬೇಕು ಇದರಲ್ಲಿ ಕಿ.ಪೂ ದಿಂದ ಈಗಿನ ವರೆಗೆ ವಿವರಿಸಿದ್ದ ಆಗುಂಬೆ ನಟರಾಜರಿಗೆ ಧನ್ಯವಾದ ಅರ್ಪಿಸಬೇಕು. ವಿದ್ವಾಂಸ ಆಲ್ ಬರೂನಿ ಭಾರತದಲ್ಲಿ ಹತ್ತು ವರ್ಷ ತಂಗಿ ಪ್ರಸಿದ್ಧ ‘ಇಂಡಿಕಾ’ ಅಥವಾ ಟಹರೀಖ್ –ಇ- ಹಿಂದ್ ಎಂಬ ಉದದ್ಗ್ರಂಥ ರಚಿಸಿ ಭಾರತದ ನಾಗರಿಕತೆಯ ಬಗ್ಗೆ ಉತ್ತಮ ಗ್ರಂಥ ರಚಿಸಿ ಇತಿಹಾಸಕಾರರಿಗೆ ಮಹತ್ವದ ಕೊಡುಗೆ ನೀಡಿದ ಮೊಘಲರ ವಂಶಾವಳಿ ಬಾಬರ್ 1525-1530 ಹುಮಾಯಾನ್ 1530-1555, ಅಕ್ಬರ್ 1555-1605, ಜಹಾಂಗೀರ್ 1605-1626, ಶಹಜಹಾನ್ 1626-1665, ಔರಂಗಜೇಬ 1652-1706, ಬಹದ್ದೂರ ಶಾ 1706-1712, ಜಹಂದರ್ ಶಾ 1712-1713, ಫರೋಖ ಸಿಯಾರ್ 1712-1718, ರಫಿ-ಉದ್- ದರ್ಜತರಪಿ-ಉದ್-ದಲಾ 1710-1735, ಮೊಹಮ್ಮದ ಶಾ 1719-1720, ಅಹ್ಮದ ಶಾ 1727-1774, ಅಜಿಜುದ್ದೀನ್ ಅಲಂಗೀರ್ 1753-1759, ಶಾ ಅಲ್‍ಮ್ 1759-1806, ಅಕ್ಬಲ್ ಶಾ 1806-1837, ಮಹ್ಮದ ಬಹದ್ದೂರ ಶಾ 1833-1857, ಮುಘಲರು ಪರ್ಶಿಯನ್ ಭಾಷೆಯನ್ನು ರಾಜ್ಯ ಭಾಷೆಯಾಗಿನ್ನಾಗಿ ಜಾರಿಗೆ ತಂದರು ಪರ್ಶಿಯನರು ‘ನೌರೋಜ್’ ಅಂದರೆ ಹಿಂದೂಗಳ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು ಹಿಂದೂ ಮತ್ತು ಪರ್ಶಿಯನರು ಆಚರಿಸುವ ತುಲಾಭಾರ ಪದ್ಧತಿಯನ್ನು ಜಾರಿಗೆ ತಂದರು.
ರಾಷ್ಟ್ರೀಯ, ಏಕತೆ ಹೊಂದಿದ್ದರೆ ಮಾತ್ರ ಸ್ವಾತಂತ್ರ್ಯ ಸುಖ ಅನುಭವಿಸಲು ಸಾಧ್ಯ ಎಂಬ ಸಾಮಾನ್ಯ ಪ್ರಜ್ಞೆ ಹೊಂದದ ಇಂತಹ ಪ್ರಜ್ಞಾಹೀನರು ತಾವು ಕಮ್ಯುನಿಸ್ಟರು, ಸೋಷಲಿಸ್ಟರು, ಕ್ಯಾಸಿಟರ್ ಲಿಸ್ಟರ್ ಬಿಬಿರ ಲಿಸ್ಟರು ಎಂಬ ಪಣಕ್ಕೆ ಪ್ರಾಮುಖ್ಯತೆ ನೀಡದೆ, ಕೇವಲ ಶಾಸ್ತ್ರ ವ್ಯಸನಿಗಳಾಗಿ ಜೀವನ ಸಾಗಿಸಿದರು ವಿವಿಧ ಶಾಸ್ತ್ರ ವಿಧಾನ ಕಲಾ, ವಿಜ್ಞಾನ ಪಂಡಿತರಾಗಿದ್ದವರು ಸ್ವಾತಂತ್ರ್ಯ ಎಂಬ ಪದದ ಅರ್ಥವೇ ಅರಿಯದಂತೆ ಆಳುವವರಿಗೆ ವಿಧೇಯರಾಗಿ ಜೀವಿಸಿದರು.
ಭಾರತೀಯರಿಗೆ ‘ಶಾಂತಿ ಮಂತ್ರ’ ಜಪಿಸುವುದು ಅತ್ಯಂತ ಮುಖ್ಯಕಾರ್ಯ ವೇದೋಪನಿಷತಗಳಿಂದಲೇ ಪ್ರಾರಂಭಗೊಂಡ ‘ ಓಂ ಶಾಂತಿಃ ಶಾಂತಿಃ ಶಾಂತಿಃ ಮಂತ್ರ ಅತ್ಯಂತ ಪ್ರಚಲಿತವಾದ ಮಂತ್ರ ಈ ಮಂತ್ರ ಒಪ್ಪಿಸುವವರಿಗೆ ಬ್ರಿಟಷರು ಶಾಂತಿಯನ್ನು ಒದಗಿಸಿಕೊಟ್ಟಿದ್ದು ಒಂದು ಮಹಾ ಕೊಡುಗೆಯಾಗಿತ್ತು. ಹಿಂದೂ ಧರ್ಮಾನುಯಾಯಿಗಳಿಗೆ ‘ಧರ್ಮ’ ಎಂದರೆ ಖeಟigioಟಿ ಅಲ್ಲ ಧರ್ಮ ಎಂದರೆ ಒಳ್ಳೆಯ ಕೆಲಸಗಳಿಗೆ ಸಂಬಂಧಿಸಿದ ಒಂದು ಪರಿಕಲ್ಪನೆ ಎಂದು ಹೇಳಲಾಗಿದೆ ‘ಧರ್ಮÀ’ ಎಂದರೆ ‘ಕರ್ತವ್ಯ’ ಎಂದು ಕೂಡ ಅರ್ಥೈಸಲಾಗುತ್ತಿದೆ ‘ಧರ್ಮ’ ಎಂದರೆ ಒಳ್ಳೆಯದು ‘ಅಧರ್ಮ’ ಎಂದರೆ ಕೆಟ್ಟದ್ದು ಎಂಬುದಾಗಿ ಅರ್ಥೈಸಲಾಗುತ್ತಿದೆ.
‘ಸ್ವಾತಂತ್ರ್ಯ’ ಎಂದರೆ ಜವಾಬ್ದಾರಿ ಅದು ಒಂದು ಉತ್ಕøಷ್ಟ ಸಚ್ಛಾರಿತ್ರತೆ ಎಂದು ನಂಬಿದ ಅಮೇರಿಕನ್ನರು ಅದನ್ನು ಗಂಭೀರವಾಗಿ ಪರಿಗಣಿಸಿ ಪಾಲಿಸುತ್ತಿದ್ದಾರೆ. ಈ ಎರಡು ಗುಣಗಳಾದ ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳನ್ನು ಅಳವಡಿಸಿ ಪಾಲಿಸದಿದ್ದರೆ ಅದು ಕೊಚ್ಚೆ ಕೊಳಕುಗಳ ಅವ್ಯವಸ್ಥೆಗಳ ಬೀಡಾಗುತ್ತದೆ.
ಮಾಂಟಿಗೋ ಜೆಮ್ಪ ಘೋರ್ಡ ವರದಿ ಈ ರೀತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿತು ಜಾತಿಯ ಮತದಾರ ಕ್ಷೇತ್ರಗಳು ವರ್ಗ ಭೇದಗಳನ್ನು ಭದ್ರಗೋಳಿಸುತ್ತವೆ ಎಂದು ಹೇಳಿ ಮುಂದಿನ ಪ್ಯಾರಾದಲ್ಲಿ ಅವರು ಪಂಥ ಹಾಗೂ ಜಾತಿಗಳ ಹೆಸರಿನಲ್ಲಿ ಜನಾಂಗವನ್ನು ವಿಭಜಿಸುವ ಪ್ರಯತ್ನವು ನಿಜಕ್ಕೂ ರಾಜಕೀಯ ಬಣ್ಣಗಳನ್ನು ನಿರ್ಮಿಸುವುದಲ್ಲದೆ ತಾವು ಪರಸ್ಪರ ವಿರುದ್ಧವಾದ ಗುಂಪುಗಳವರೆಂದೂ ನಾಡಿನ ನಾಗರಿಕರಲ್ಲವೆಂದು ಯೋಚಿಸುವಂತೆ ಮಾಡುತ್ತಾರೆ. ಇಂತಹ ವ್ಯವಸ್ಥೆಯಿಂದ ರಾಷ್ಟ್ರೀಯ ಪ್ರತಿನಿಧಿತ್ವಕ್ಕೆ ಹೇಗೆ ಅದು ಪರಿವರ್ತನೆಗೋಳ್ಳಬಲ್ಲದು ಎಂಬುದು ಅರ್ಥವಾಗದ ಸಂಗತಿ. ಬ್ರಿಟಿಷರು ಜನರನ್ನಾಳಲು ಒಡೆದು ಆಳುವ ನೀತಿ ಅನುಸರಿಸುತ್ತಾರೆಂದು ಹಲವೊಮ್ಮೆ ಅಪಾದಿಸುವುದುಂಟು ಆದರೆ ಜನರು ತಮ್ಮನ್ನು ತಾವು ಆಳಿಕೊಳ್ಳುವ ಪ್ರಕ್ರಿಯೆ ಆರಂಭಿಸುವಾಗಲೇ ಅನಾವಶ್ಯಕವಾಗಿ ಅವರನ್ನು ಅದು ಬಡೆಯತೊಡಗಿಸಿದಾಗ ಅಂತಹ ಪ್ರಕಿಯೆ ಸಂಕುಚಿತ ಡೋಂಗಿ ಎನ್ನುವ ಆರೋಪಕ್ಕೆ ಉತ್ತರಿಸುವುದು ಕಠಿಣವಾದೀತು.
ಭಾರತೀಯರು ತಮ್ಮ ಅತೀವ ಸ್ವಾರ್ಥತೆಯಿಂದ ತಮ್ಮ ತನವನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ ಎಲ್ಲಿಯವರೆಗೆ ಈ ದೇಶ ನಮ್ಮ ದೇಶ ದೇಶಕ್ಕಾಗಿ ನಾವು ತ್ಯಾಗ ಮಾಡಬೇಕು, ಈ ದೇಶಕ್ಕಾಗಿ ನಮ್ಮ ತುನು, ಮನ, ಧನ ವ್ಯಯಿಸಬೇಕು ಎಂಬ ಉತ್ಕಟ ಬಯಕೆ ನಮ್ಮಲ್ಲಿ ಉಂಟಾಗುವುದಲ್ಲವೋ ಅಲ್ಲಿಯವರೆಗೆ ನಾವು ಪುನಃ ಗುಲಾಮಗಿರಿಯ ಸ್ಥಾನಕ್ಕೆ ಮರಳುವ ಸಾಧ್ಯತೆ ಇದೆ. ಈ ಪುಸ್ತಕ ತರಸಿ ಓದಿರಿ ವಿಭಜನೆ ಏಕೆ ಆಯಿತು ಹೇಗೆ ಆಯಿತು ಓದಿಯೇ ಅರಿಯಬೇಕು ಆಗುಂಬೆ ಎಸ್ ನಟರಾಜರಿಗೆ ದೇವರು ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುವೇನು. ಅವರ ಚರವಾಣಿ: 9481423004
ಶ್ರೀ ಎಂ.ವೈ. ಮೆಣಸಿನಕಾಯಿ
ಬೆಳಗಾವಿ
ಮೊ: 9449209570

Leave A Reply

Your email address will not be published.