ಪೋಷಣ ರಥ ಜಾಥಾ: ಪೌಷ್ಟಿಕಾಂಶದ ಮಹತ್ವದ ತಿಳಿವಳಿಕೆ

0 78

ಬೆಳಗಾವಿ: ಪೋಷಣ ಅಭಿಯಾನದ ಮಾಸಾಚರಣೆ ಅಂಗವಾಗಿ ನಗರ ಯೋಜನೆಯ ನಗರ ವಲಯದ ವತಿಯಿಂದ ಪಿ.ಕೆ.ಕ್ವಾರ್ಟರ್ಸನಲ್ಲಿ “ಪೋಷಣ ರಥ ಜಾಥಾ” ಕಾರ್ಯಕ್ರಮ ಮಂಗಳವಾರ  ಹಮ್ಮಿಕೊಳ್ಳಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ನಗರ ವಲಯದ ವತಿಯಿಂದ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಲಾಯಿತು.

ಹಿರಿಯ ಮೇಲ್ವಿಚಾರಕಿ ಜ್ಯೋತಿ ಇಂಡಿ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮೇಲ್ವಿಚಾರಕಿ ಭಾರತಿ ಹಿರೇಮಠ ಅವರು, ಮಕ್ಕಳ ಬೆಳವಣಿಗೆಯಲ್ಲಿ ಪೌಷ್ಠಿಕಾಂಶದ ಮಹತ್ವ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಗುರುತಿಸುವಿಕೆಯ ಕುರಿತು ಮಾಹಿತಿಯನ್ನು ನೀಡಿದರು.

ನಗರ ವಲಯದ ಎಲ್ಲ ಅಂಗನವಾಡಿಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.