ಬೆಳಗಾವಿ: ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸೆ.31 ರೊಳಗೆ ಡಾಟಾ ಎಂಟ್ರಿ ಕಾರ್ಯವನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ.
ಬೈಲಹೊಂಗಲ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೈಲಹೊಂಗಲ ಉಪವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೈಲಹೊಂಗಲ ಉಪವಿಭಾಗದಲ್ಲಿಯ ಬರುವ ಬೈಲಹೊಂಗಲ, ಕಿತ್ತೂರ, ಮೂಡಲಗಿ, ಉಮದುರ್ಗ,
ಸವದತ್ತಿ ಹಾಗೂ ಗೋಕಾಕ ಈ 6 ತಾಲೂಕುಗಳ ಪೈಕಿ ಸನ್ 2020-21ನೇ ಸಾಲಿನಲ್ಲಿ ಒಟ್ಟು 133 ಎ
ವರ್ಗದ, 17 ಬಿ ವರ್ಗದ ಹಾಗೂ 12.30 ಸಿ ವರ್ಗದ ಹೀಗೆ ಒಟ್ಟು 1480 ಮನೆಗಳ ಹಾನಿಯಾಗಿದ್ದು,
ಅವುಗಳ ಪೈಕಿ 70% ಹಾನಿಯ ಸರ್ವೇ ಕಾರ್ಯವು ಮುಕ್ತಾಯಗೊಂಡಿರುತ್ತದೆ. ಇನ್ನೂಳಿದ 30% ಶೇ
ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಜೀವಹಾನಿ ಹಾಗೂ ಜಾನುವಾರು ಹಾನಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಿ ಬೆಳೆ ಹಾನಿಯ ಕಾರ್ಯವನ್ನು ಸೆಪ್ಟೆಂಬರ್ 21 ರೊಳಗಾಗಿ
ಪೂರ್ಣಗೊಳಿಸಲು ತಿಳಿಸಿದರು.
ಭೂಮಿ / ಪೈಕಿ ಪಹಣಿ / 3 & 9 ವ್ಯತ್ಯಾಸದ ಕುರಿತು.
ಬೈಲಹೊಂಗಲ ವಿಭಾಗದ 6 ತಾಲೂಕುಗಳ ಪೈಕಿ ಪಹಣಿ ಪ್ರಗತಿ ಪರಿಶೀಲಿಸಿ ಪೈಕಿ ಪಹಣಿಯಲ್ಲಿ ಉಪವಿಭಾಗದಲ್ಲಿ ಬಾಕಿ ಇರುವ 95146 ಪ್ರಕರಣಗಳನ್ನು ತಾಲೂಕುವಾರು ಅವಧಿಯನ್ನು ನಿಗದಿಪಡಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ತಿಳಿಸಿದರು.
ಬೈಲಹೊಂಗಲ ಉಪವಿಭಾಗದಲ್ಲಿ 498 ಗ್ರಾಮಗಳ ಪೈಕಿ 337 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಹೊಂದಿದ್ದು,
ಇನ್ನುಳಿದ 161 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ, ಸ್ಮಶಾನ ಭೂಮಿಗೆ ಪೂರೈಸಲು ಅಥವಾ
ಲಭ್ಯವಿಲ್ಲದೆ ಇದ್ದಲ್ಲಿ ಖಾಸಗಿ ಜಮೀನು ಖರೀದಿ ನೀಡಲು ಖಾಸಗಿ ಜಮೀನಿನ ಮಾಲೀಕರು ಮುಂದೆ
ಬಂದಲ್ಲಿ ನೇರ ಖರೀದಿ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಿದರು.
ನಂತರ ಸಾಮಾಜಿಕ ಭದ್ರತೆಯಡಿ ನೀಡಲಾಗುವ ವಿವಿಧ ಪಿಂಚಣಿಗಳ ಆಧಾರ ಸೀಡಿಂಗ್ ಕುರಿತು ಕ್ರಮ ಜರುಗಿಸಲು ಹಾಗೂ ಅದರಲ್ಲಿ ಸಮಸ್ಯೆಗಳಿದ್ದಲ್ಲಿ ಸದರಿ ಸಮಸ್ಯೆಗಳ ಯಾದಿಯನ್ನು ಗ್ರಾಮವಾರು ತಯಾರಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದರು.
ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ ಸೇರಿದಂತೆ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.