ಬೆಳಗಾವಿ: ಬೆಳಗಾವಿಯ ಶೆಟ್ಟಿ ಗಲ್ಲಿಯ ಹಿರಿಯ ನಿವಾಸಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ ದಿ. ವೀರಪ್ಪ ಗದ್ದಿಹಳ್ಳಿಶೆಟ್ಟಿ ಅವರ ಧರ್ಮ ಪತ್ನಿ ಬಸವಣ್ಣೆವ್ವ ವೀರಪ್ಪ ಗದ್ದಿಹಳ್ಳಿಶೆಟ್ಟಿ (87) ಅವರು ಶನಿವಾರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ರಕರ್ತ ಮಹಾಂತೇಶ ಗದ್ದಿಹಳ್ಳಿಶೆಟ್ಟಿ ಸೇರಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ. ಹಿರಿಯರಾಗಿದ್ದ ಬಸವಣ್ಣೆವ್ವ ವೀರಪ್ಪ ಗದ್ದಿಹಳ್ಳಿಶೆಟ್ಟಿ ಅವರ ನಿಧನಕ್ಕೆ ವಿಶಾಲ ಕರ್ನಾಟಕ ಡಾಟ್ ಕಾಮ್ ತೀವ್ರ ಸಂತಾಪ ವ್ಯಕ್ತ ಪಡಿಸಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಗಲಿಕೆಯ ಶೋಕ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.