ಗೋಕಾಕ: ಘಟಪ್ರಭಾದಲ್ಲಿ ಕಾಂಗ್ರೆಸ್ ಸೇವಾದಳ ಉದ್ಘಾಟನೆಯನ್ನು ಮುಂದೂಡಲಾಗಿದ್ದು ಈಗಾಗಲೇ ನಿಗದಿಯಾಗಿದ್ದ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯನ್ನು ಮಾತ್ರ ಆಚರಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಹುಲ ಗಾಂಧಿ ಅವರನ್ನು ಖುದ್ದು ಭೇಟಿಯಾಗಿ ಉದ್ಘಾಟನೆಗೆ ಆಹ್ವಾನಿಸಿ ಮುಂದಿನ ದಿನಾಂಕವನ್ನು ನಿಗದಿಪಡಿಸುತ್ತೇನೆ ಎಂದರು.
ಗಾಂಧಿ ಜಯಂತಿ ದಿನದಂದು ಸಿದ್ಧರಾಮಯ್ಯ, ಡಿ.ಕೆ.ಶಿವುಕುಮಾರ, ಎಸ್. ಆರ್. ಪಾಟೀಲ ಸೇರಿ ಗಣ್ಯರು ಘಟಪ್ರಭಾದ ಕಾಂಗ್ರೆಸ್ ಸೇವಾದಳ ಕಚೇರಿಗೆ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ ಅವರು ಸೇವಾದಳ ಉದ್ಘಾಟನೆಗೆ ರಾಹುಲ ಗಾಂಧಿ ಅವರಿಗಾಗಿ ಮುಂದೂಡಲಾಗಿದೆ ಎಂದು ತಿಳಿಸಿದರು.