ಬೆಳಗಾವಿ : ಇಲ್ಲಿನ ಆಂಜನೇಯ ನಗರದ ಹಿರಿಯರಾದ ಶಿವಪುತ್ರಯ್ಯ ಗಂಗಯ್ಯ ವಿರಕ್ತಮಠ (೮೩) ಸೋಮವಾರ ಸಾಯಂಕಾಲ ಹೃದಯಾಘಾತದಿಂದ ನಿಧನರಾದರು.
ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಾದ್ಯಾಪಕರಾಗಿದ್ದ ಶಿವಪುತ್ರಯ್ಯ ಅವರು ಪತ್ನಿ, ಪುತ್ರ, ಓರ್ವ ಪುತ್ರಿ ಸೇರದಂತೆ ಅಪಾರ ಶಿಷ್ಯ ಬಳಗ ಹಾಗೂ ಬಂಧು ಬಳಗ ಅಗಲಿದ್ದಾರೆ.
ಶಿವಪುತ್ರಯ್ಯ ಅವರು ಮೂಲತಃ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ವಿರಕ್ತಮಠ ಪರಂಪರೆಯವರು. ಸೋಮವಾರ ರಾತ್ರಿ ಸದಾಶಿವ ನಗರ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಯಿತು.