ಬೆಳಗಾವಿ ಜಿಲ್ಲೆಯಲ್ಲಿ ಗಾಂಧೀಜಿ ಹೆಜ್ಜೆ ಗುರುತುಗಳು

0 103

ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ತನ್ನ ಚಿಂತನೆ, ಜೀವನ ಸಂದೇಶಗಳಿಂದ ಜಗತ್ತಿನುದ್ದಕ್ಕೂ ವ್ಯಾಪಿಸಿ ನಿಂತ ಮಹಾನ್ ಚೇತನ. ಮಹಾತ್ಮಾ ಗಾಂಧೀಜಿ ಅವರ ಜೊತೆಗೆ ಬೆಳಗಾವಿಗೆ ಚಾರಿತ್ರಿಕ ನಂಟಿದೆ. ಬೆಳಗಾವಿ ಜಿಲ್ಲೆಯ ಜೊತೆಗೆ ಅವರ ಒಟನಾಟವಿತ್ತು. ಗಾಂಧೀಜಿ ಅವರು ತಮ್ಮ ಜೀವನದಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಾತ್ರ ಅಧ್ಯಕ್ಷತೆ ವಹಿಸಿಕೊಂಡಿದ್ದು ವಿಶೇಷ.


ಡಿಸೆಂಬರ 26, 1924ರಲ್ಲಿ ಕಾಂಗ್ರೆಸ್ 39ನೇ ಅಧಿವೇಶನ ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆದಿತ್ತು. ಜಿ¯್ಲÉಯ ಹುದಲಿ ಗ್ರಾಮದ ಜಮೀನುದಾರಾದ ಕರ್ನಾಟಕ ಸಿಂಹ ಎಂದೇ ಖ್ಯಾತರಾಗಿದ್ದ ಗಂಗಾಧರರಾವ್ ದೇಶಪಾಂಡೆ ಆಗ ಕಾಂಗ್ರೆಸ್ನಲ್ಲಿ ದೊಡ್ಡ ನೇತಾರರು. ಅವರ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. .
ಇಂದು ಟಿಳಕವಾಡಿ ಎಂದು ಕರೆಯಲಾಗುವ ಸ್ಥಳದಲ್ಲಿ ಅಧಿವೇಶನ ನಡೆದಿತ್ತು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಲಾಗಿತ್ತು. ಇಡೀ ಪ್ರದೇಶವನ್ನು ಸಮತಟ್ಟಗೊಳಿಸಲಾಗಿತ್ತು. ಈ ಪ್ರದೇಶಕ್ಕೆ ವಿಜಯನಗರ ಸಾಮ್ರಾಜ್ಯದ ಸವಿನೆನಪಿಗಾಗಿ ವಿಜಯನಗರವೆಂದು ನಾಮಕರಣ ಮಾಡಲಾಗಿತ್ತು. ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸುವ ಜನರಿಗೆ ಕುಡಿಯುವ ನೀರು ಪೂರೈಸಲು ಹತ್ತಿರದಲ್ಲಿಯೇ ದೊಡ್ಡ ಬಾವಿ ಅಗೆಯಲಾಯಿತು. ಅದಕ್ಕೆ ಪಂಪಾ ಸರೋವರ ಎಂದು ಹೆಸರಿಸಲಾಗಿತ್ತು. ಅದೀಗ ಕಾಂಗ್ರೆಸ್ ಬಾವಿ ಎಂದು ಜನಪ್ರಿಯವಾಗಿದೆ. ಅಧಿವೇಶನಕ್ಕಾಗಿ ಆಗಮಿಸಿದ್ದ ಜನರಿಗೆ ಸ್ಥಳೀಯರು ಊಟೋಪಚಾರದ ವ್ಯವಸ್ಥೆ ಮಾಡಿದ್ದರು. ಸ್ವಚ್ಛತಾ ಕಾರ್ಯಕ್ಕಾಗಿ ಸ್ಥಳೀಯರೇ ಟೊಂಕಕಟ್ಟಿ ನಿಂತಿದ್ದರು. ಮುಖಂಡರಾದ ಡಾ.ಎನ್.ಎಸ್. ಹರ್ಡಿಕರ, ಭೀಮರಾವ್ ಪೆÇೀತದಾರ, ಆರ್.ಕೆಂಭಾವಿ, ಎಸ್.ಎಲ್. ವಾಮನ, ಗೋವಿಂದರಾವ ಯಾಳಗಿ, ಜೀವನರಾವ ಯಾಳಗಿ ಸೇರಿದಂತೆ ಹಲವರು ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡರು. ಇಲ್ಲಿನ ಶಿಸ್ತುಬದ್ಧ ವ್ಯವಸ್ಥೆ ನೋಡಿದ ಗಾಂಧೀಜಿಯವರು ಮುಕ್ತಕಂಠದಿಂದ ಹೊಗಳಿದ್ದರು. .
ಒಂದು ವಾರ ವಾಸ್ತವ್ಯ: ಅಧಿವೇಶನ ಆರಂಭವಾಗುವುದಕ್ಕೂ ಒಂದು ವಾರ ಮೊದಲು ಗಾಂಧೀಜಿ ಅವರು ಬೆಳಗಾವಿಗೆ ಆಗಮಿಸಿದ್ದರು. ಹಲವು ಜನ ಮುಖಂಡರು ಎಷ್ಟೇ ಒತ್ತಾಯ ಮಾಡಿದ್ದರೂ ಅವರ ಮನೆಯಲ್ಲಿ ವಾಸ್ತವ್ಯ ಮಾಡಲಿಲ್ಲ. ಅಧಿವೇಶನ ಸ್ಥಳದ ಸಮೀಪವೇ ಇರುವ ವ್ಯಾಕ್ಸಿನ ಡಿಪೆÇ ಮೈದಾನದಲ್ಲಿ ಟೆಂಟ್ ನಿರ್ಮಿಸಿಕೊಂಡು ಇದ್ದರು. ಈ ಸಮಯದಲ್ಲಿ ಅಕ್ಕಪಕ್ಕದ ಗ್ರಾಮಗಳಿಗೆ ಗಾಂಧಿ ಭೇಟಿ ನೀಡಿದ್ದರು. ಅಲ್ಲಿನ ಸ್ಥಳೀಯರ ಜೊತೆ ಮಾತನಾಡಿದ್ದರು. .
ಬೆಳಗಾವಿಯ ಹುದಲಿ ಗ್ರಾಮದಲ್ಲಿ ಗಾಂಧೀಜಿ- 1937
ಅಸಹಕಾರ ಬೀಜ ಮಂತ್ರ: ಅಹಿಂಸಾ ಮಾರ್ಗದಲ್ಲಿಯೇ ಸ್ವಾತಂತ್ರ್ಯ ಹೋರಾಟ ಮುಂದುವರಿಸಬೇಕು. ಹಿಂಸೆಗೆ ಅವಕಾಶ ಮಾಡಿಕೊಡಬಾರದು. ಅಸಹಕಾರ ಮಾಡುವ ಮೂಲಕ ಬ್ರಿಟಿಷರೇ ದೇಶ ಬಿಟ್ಟುಹೋಗುವಂತೆ ಮಾಡಬೇಕು’ ಎಂದು ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಧಿವೇಶನದಲ್ಲಿ ಕರೆ ನೀಡಿದ್ದರು. ಅಸಹಕಾರ ಆಂದೋಲನದ ಬೀಜ ಮೊದಲು ಬಿತ್ತಿz್ದÉೀ ಬೆಳಗಾವಿಯಲ್ಲಿ ಎಂದು ಹೇಳಲಾಗುತ್ತಿದೆ. ಜವಾಹರಲಾಲ್ ನೆಹರೂ, ಪಟ್ಟಾಭಿರಾಮ ಸೀತಾರಾಮಯ್ಯ, ಸರೋಜಿನಿ ನಾಯ್ಡು, ಅನಿ ಬೆಸೆಂಟ್, ಮೌಲನಾ ಮೊಹಮ್ಮದ ಅಲಿ ಸೇರಿದಂತೆ ಹಲವು ನಾಯಕರು ಅಧಿವೇಶನದಲ್ಲಿ ಭಾಗವಹಿಸಿದ್ದರು. .
ಕಾಂಗ್ರೆಸ ಬಾವಿ ಹಾಗೂ ಗಾಂಧಿ ಸ್ಮಾರಕ ಭವನ
ವೀರಸೌಧ ನಿರ್ಮಾಣ:ಅಂದು ಅಧಿವೇಶನ ನಡೆದ ಸ್ಥಳದಲ್ಲಿ ಇಂದು ಹತ್ತು ಹಲವು ಕಟ್ಟಡಗಳು ತಲೆಎತ್ತಿವೆ. ಅಧಿವೇಶನದ ನೆನಪಿನ ರೂಪದಲ್ಲಿ ಪಂಪ ಸರೋವರ (ಕಾಂಗ್ರೆಸ್ ಬಾವಿ) ಮಾತ್ರ ಉಳಿದುಕೊಂಡಿದೆ. 2001-02ರಲ್ಲಿ ಈ ಬಾವಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಸುತ್ತಲೂ ಉದ್ಯಾನ ನಿರ್ಮಿಸಲಾಗಿದೆ. ಗಾಂಧೀಜಿ ಪ್ರತಿಮೆ ಒಳಗೊಂಡ ಸ್ಮಾರಕ ಭವನ ನಿರ್ಮಿಸಲಾಗಿದೆ. ಗಾಂಧೀಜಿ ಅವರ ಅಪರೂಪದ ಭಾವಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಗಾಂಧೀಜಿ ಅವರಿಗೆ ಸಂಬಂಧಿಸಿದ ಕೃತಿಗಳನ್ನು ಒಳಗೊಂಡಿರುವ ಗ್ರಂಥಾಲಯವನ್ನು ಪಕ್ಕದಲ್ಲಿಯೇ ತೆರೆಯಲಾಗಿದೆ.

Leave A Reply

Your email address will not be published.