ಸ್ಮಶಾನ ಭೂಮಿ ಸ್ವಚ್ಛತಾ ಕಾರ್ಯಕ್ರಮ

0 191

ಚನ್ನಮ್ಮ ಕಿತ್ತೂರು: ಸಮೀಪದ ಮಲ್ಲಾಪುರ ಕೆಎ ಗ್ರಾಮದ ಗೋಸಾವಿ ಸಮಾಜದ ಯುವಕರು ಸ್ವಯಂ ಪ್ರೇರಣೆಯಿಂದ ಸ್ಮಶಾನ ಭೂಮಿಯನ್ನು ರವಿವಾರ ಸ್ವಚ್ಛಗೊಳಿಸಿದರು.

ಸರ್ಕಾರ ಸ್ವಚ್ಛ ಭಾರತ ಅಭಿಯಾನ ಹೆಸರಿನಲ್ಲಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಾರ್ವಜನಿಕರ ಸಹಕಾರ ಇಲ್ಲದೆ ವಿಫಲವಾಗಿವೆ. ಆದರೆ ಸ್ವಯಂ ಪ್ರೇರಣೆಯಿಂದ ಯುವಕರು ಕೈಗೊಂಡ ಈ ಕಾರ್ಯ ಇತರರಿಗೆ ಮಾದರಿಯಾಗಿದೆ.

ಈ ಕಾರ್ಯದಲ್ಲಿ ಸಮಾಜದ ಹಿರಿಯರು, ಯುವಕರಾದ ದತ್ತಾತ್ರೇಯ ಬಾವಾನವರ, ಮಂಜುನಾಥ ಬಾವಾನವರ, ಪ್ರವೀಣ ಗಿರಿ, ವಿನಾಯಕ ಗೋಸಾವಿ, ಬಾಬು ಬಾವಾನವರ, ಸಂದೀಪ ಬಾವಾನವರ, ದಿನಕರ ಗಿರಿ, ಸಾಗರ ಗಿರಿ, ವಿಶ್ವನಾಥ ಗಿರಿ, ಸಚಿನ ಗಿರಿ, ಚೇತನ ಗೋಸವಿ, ಸಂಜು ಗೋಸಾವಿ ಸೇರಿದಂತೆ ಇತರರು ಇದ್ದರು.

Leave A Reply

Your email address will not be published.