ಭೂನ್ಯಾಯ ಮಂಡಳಿಗೆ ನಾಮನಿರ್ದೇಶನ

0 239

ಬೆಳಗಾವಿ : ಬೆಳಗಾವಿ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯರಾಗಿ ಬಿಜೆಪಿ ಯುವ ಧುರೀಣ ಶಶಿಭೂಷಣ ಪಾಟೀಲ ನಾಮನಿರ್ದೇಶನಗೊಂಡಿದ್ದಾರೆ.
ಮಹಾಂತೇಶ ನಗರದ ರಹವಾಸಿಯಾಗಿರುವ ಶಶಿಭೂಷಣ ಪಾಟೀಲ ಹಲವಾರು ವರ್ಷಗಳಿಂದ ವಿವಿಧ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಪಕ್ಷ ನಿಷ್ಠೆಯಿಂದ ಸೇವೆ ಮಾಡುತ್ತಿರುವುದನ್ನು ಪರಿಗಣಿಸಿ ರಾಜ್ಯ ಸರಕಾರ ಅವರನ್ನು ಬೆಳಗಾವಿ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
ಅದರಂತೆ ಮಂಡಳಿಗೆ ವಡಗಾವಿ ನಾಝರ ಕ್ಯಾಂಪ್ ನ ಮಂಗೇಶ ಪವಾರ, ಹೊನಗಾದ ವಿಜಯ ವನಮನಿ ಹಾಗೂ ಮಾಸ್ತಮರ್ಡಿಯ ಬಾಳಪ್ಪಾ ಬುರಾಣಿ ಅವರನ್ನು ಸದಸ್ಯರಾಗಿ ನಾಮನಿರ್ದೇನಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

Leave A Reply

Your email address will not be published.